
ನವದೆಹಲಿ: ಸಮಾನ ನಾಗರಿಕ ಸಂಹಿತೆ ಜಾರಿಗೆ ತರುವುದರಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಪರೀಕ್ಷೆ ನಡೆಸಲು ಕೇಂದ್ರ ಸರ್ಕಾರ ಕಾನೂನು ಆಯೋಗವನ್ನು ಕೋರಿದೆ.
ಸಮಾನ ನಾಗರಿಕ ಸಂಹಿತೆ ವಿಷಯ ರಾಜಕೀಯ ವಿವಾದಕ್ಕೆ ಸಂಬಂಧಿಸಿದ್ದರೂ ಕೂಡ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಅದರ ತಳಮಟ್ಟದ ಪರಿಣಾಮಗಳನ್ನು ಪರೀಕ್ಷೆ ನಡೆಸಲು ಆರಂಭಿಸಿದೆ.
ಎಲ್ಲಾ ಖಾಸಗಿ ಕಾನೂನುಗಳನ್ನು ಬದಿಗೊತ್ತಿ ಸಾಮಾನ್ಯ ಜನರ ಹಿತಾಸಕ್ತಿಗೆ ಉಪಯೋಗವಾಗುವಂತಹ ಕಾನೂನನ್ನು ಜಾರಿಗೆ ತರುವುದು ಸಮಾನ ನಾಗರಿಕ ಸಂಹಿತೆಯಾಗಿದೆ. ಇದು ಆಸ್ತಿ, ಮದುವೆ, ವಿಚ್ಛೇದನ, ಉತ್ತರಾಧಿಕಾರಿ ಮೊದಲಾದ ವಿಷಯಗಳನ್ನು ಒಳಗೊಳ್ಳುತ್ತದೆ. ಸಂವಿಧಾನ ನಿಯಮದ 44ನೇ ಪರಿಚ್ಛೇದ ಸಮಾನ ನಾಗರಿಕ ಸಂಹಿತೆಯ ಪರಿಣಾಮಗಳ ಕುರಿತು ವಿವರಿಸುತ್ತದೆ.
ಸಮಾನ ನಾಗರಿಕ ಸಂಹಿತೆಗೆ ಸಂಬಂಧಪಟ್ಟಂತೆ ಪರೀಕ್ಷೆ ನಡೆಸುವಂತೆ ಕಾನೂನು ಸಚಿವಾಲಯ ಕಾನೂನು ಆಯೋಗಕ್ಕೆ ಸೂಚನೆ ನೀಡಿದ್ದು, ವರದಿ ಸಲ್ಲಿಸುವಂತೆ ಹೇಳಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಈಗ ಇರುವ ಕೇಸುಗಳನ್ನು ಸಹ ಕಾನೂನು ಆಯೋಗಕ್ಕೆ ಬರೆದ ಪತ್ರದಲ್ಲಿ ಕೇಂದ್ರ ಕಾನೂನು ಸಚಿವಾಲಯ ಉಲ್ಲೇಖಿಸಿದೆ.
Advertisement