
ನವದೆಹಲಿ: ಮಾಜಿ ಕೇಂದ್ರ ಸಚಿವ ಚಿದಂಬರಂ ವಿರುದ್ಧ ಇಶ್ರಾತ್ ಜಹಾನ್ ಗೆ ಸಂಬಂಧಿಸಿದ ಎರಡನೇ ಅಫಿಡವಿಟ್ ನ್ನು ನಿರ್ದೇಶಿಸಿರುವ ಆರೋಪ ಕೇಳಿಬಂದಿರುವ ಜೊತೆಯಲ್ಲಿ, ತಿರುಚಿದ ದಾಖಲೆಗೆ ಸಹಿಹಾಕುವಂತೆ ಗೃಹ ಇಲಾಖೆ ಮಾಜಿ ಅಧೀನ ಕಾರ್ಯದರ್ಶಿಗೆ ಕಿರುಕುಳ ನೀಡಿದ್ದು ಚಿದಂಬರಂ ಗೆ ತಿಳಿದಿತ್ತು ಎಂಬ ಆರೋಪವೂ ಕೇಳಿಬಂದಿದೆ.
ಇಶ್ರಾತ್ ಜಹಾನ್ ಮತ್ತು ಆಕೆಯ ಜತೆಗಿದ್ದವರು ಲಷ್ಕರ್-ಎ- ತೊಯ್ಬಾ ಉಗ್ರರು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಆಕೆ ಮತ್ತು ಸಂಗಡಿಗರನ್ನು ಗುಜರಾತ್ ಪೊಲೀಸರು ನಕಲಿ ಎನ್ ಕೌಂಟರ್ ಮೂಲಕ ಹತ್ಯೆ ಮಾಡಿದರು ಎಂದು ತಿರುಚಿದ ಎರಡನೇ ಅಫಿಡವಿಟ್ ಗೆ ಸಹಿಹಾಕಲು ವಿಶೇಷ ತನಿಖಾ ತಂಡದ ಅಧಿಕಾರಿಗಳು ಗೃಹ ಇಲಾಖೆಯ ಆಂತರಿಕ ಭದ್ರತೆ ವಿಭಾಗದಲ್ಲಿ ಅಧೀನ ಕಾರ್ಯದರ್ಶಿಯಾಗಿದ್ದ ಆರ್ ವಿಎಸ್ ಮಣಿ ಅವರಿಗೆ ಚಿತ್ರ ಹಿಂಸೆ ನೀಡಿದ್ದರು. ಈ ವಿಷಯ ಅಂದಿನ ಗೃಹ ಸಚಿವ ಪಿ ಚಿದಂಬರಂಗೂ ತಿಳಿದಿತ್ತು ಎಂದು ಆರ್ ವಿ ಎಸ್ ಮಣಿ ಪರ ವಕೀಲ ಕನ್ವರ್ ಬಿಬಿ ಸಿಂಗ್ ಹೇಳಿದ್ದಾರೆ.
ಇಶ್ರಾತ್ ಜಹಾನ್ ಬಗ್ಗೆ ಗುಜರಾತ್ ಪೊಲೀಸರಿಗೆ ಮಾಹಿತಿ ನೀಡಿದ ಗುಪ್ತಚರ ಇಲಾಖೆ ಮುಖ್ಯಸ್ಥ ರಾಜೇಂದ್ರ ಕುಮಾರ್ ವಿರುದ್ಧ ಸಾಕ್ಷ್ಯ ಹೇಳುವಂತೆ ಚಿತ್ರ ಹಿಂಸೆ ನೀಡಿದ್ದು ಹಾಗೂ ಇಶ್ರಾತ್ ಪ್ರಕರಣದ ತನಿಖೆ ನಡೆಸುತ್ತಿದ್ದ ಎಸ್ ಐ ಟಿ ಮುಖ್ಯಸ್ಥ(ಸತೀಶ್ ವರ್ಮಾ) ಸಿಗರೇಟ್ ನಿಂದ ಮನಬಂದಂತೆ ಸುಟ್ಟಿದ್ದನ್ನು ಆರ್ ವಿ ಎಸ್ ಮಣಿ ಚಿದಂಬರಂ ಅವರ ಗಮನಕ್ಕೆ ತಂದಿದ್ದರು. ಇಶ್ರತ್ ಪ್ರಕರಣದ ಬಗೆಗಿನ ಮಾಹಿತಿಗಳನ್ನು ಮಣಿ ಈಗ ಬಹಿರಂಗಪಡಿಸುತ್ತಿಲ್ಲ. ಯುಪಿಎ ಸರ್ಕಾರವಿದ್ದಾಗಲೇ ಬಹಿರಂಗಪಡಿಸಿದ್ದರು, ಆದರೆ ಈ ಬಗ್ಗೆ ಏಕೆ ಚಿದಂಬರಂ ಮೌನ ವಹಿಸಿದ್ದರು ಎಂದು ವಕೀಲ ಕನ್ವರ್ ಬಿಬಿ ಸಿಂಗ್ ಹೇಳಿದ್ದಾರೆ.
Advertisement