ನಾಗಾಲ್ಯಾಂಡ್ ನಲ್ಲಿ ಮೊದಲ ಬಾರಿಗೆ ಬೆಂಗಾಲ್ ಟೈಗರ್ ಪತ್ತೆ, ಗುಂಡಿಕ್ಕಿ ಹತ್ಯೆ
ಗುವಾಹಟಿ: ನಾಗಾಲ್ಯಾಂಡ್ ನಲ್ಲಿ ಮೊದಲ ಬಾರಿಗೆ ಬಂಗಾಳ ಹುಲಿ ಪತ್ತೆಯಾಗಿದ್ದು, ಅದನ್ನು ಕೊಲ್ಲಲಾಗಿದೆ.
ನಾಗಾಲ್ಯಾಂಡ್ ನ ಮೆಡ್ಜಿಫೆಮ ಗ್ರಾಮದಲ್ಲಿ ಕಂಡುಬಂದ ಬಂಗಾಳ ಹೆಣ್ಣು ಹುಲಿ ಜಾನುವಾರುಗಳನ್ನು ಬೇಟೆಯಾಡಿದ್ದ ಹಿನ್ನೆಲೆಯಲ್ಲಿ ಹುಲಿಯನ್ನು ಹತ್ಯೆ ಮಾಡಲಾಗಿದೆ. ಹುಲಿಯನ್ನು ಓಡಿಸಲು ಮುಂದಾದ ಸುಮಾರು 70 ಜನರ ಯುವಕರ ಶಸ್ತ್ರಸಜ್ಜಿತ ತಂಡ ಅಪರೂಪದ ಬಂಗಾಳ ಹುಲಿಯನ್ನು ಹತ್ಯೆ ಮಾಡಿದೆ.
ಕಾಡಿನಲ್ಲಿ ಯುವಕರ ತಂಡ ಹುಲಿಯನ್ನು ಗುರುತಿಸುತ್ತಿದ್ದಂತೆಯೇ ಯುವಕನೋರ್ವನ ಮೇಲೆ ಹುಲಿ ದಾಳಿ ನಡೆಸಿದೆ. ಯುವಕನನ್ನು ಕಾಪಾಡಲು ತಂಡದಲ್ಲಿದ್ದ ಇತರ ಸದಸ್ಯರು ಹುಲಿಯ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಹುಲಿಯನ್ನು ಗ್ರಾಮದಿಂದ ಓಡಿಸಲು ಮುಂದಾಗಿದ್ದ ಯುವಕರ ತಂಡಕ್ಕೆ ಹುಲಿಯನ್ನು ಕೊಲ್ಲುವ ಉದ್ದೇಶ ಇರಲಿಲ್ಲ. ಯುವಕನೋರ್ವನನ್ನು ರಕ್ಷಿಸಲು ನಡೆಸಿದ ಗುಂಡಿನ ದಾಳಿಯಿಂದ ಹುಲಿ ಮೃತಪಟ್ಟಿದೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ದಾಖಲೆಗಳ ಪ್ರಕಾರ, ನಾಗಾಲ್ಯಾಂಡ್ ನಲ್ಲಿ ಬಂಗಾಳ ಹುಲಿ ಕಂಡಿರುವ ಉದಾಹರಣೆಗಳಿಲ್ಲ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ