47ನೇ ಬಾರಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲಿರುವ 77ರ ವೃದ್ಧ

ಒಂದಲ್ಲ, ಎರಡಲ್ಲ, ಕೊನೆಗೆ ಹತ್ತು ಬಾರಿಯೂ ಅಲ್ಲ, ಬರೋಬ್ಬರಿ 46 ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಜೈಪುರ: ಒಂದಲ್ಲ, ಎರಡಲ್ಲ, ಕೊನೆಗೆ ಹತ್ತು ಬಾರಿಯೂ ಅಲ್ಲ, ಬರೋಬ್ಬರಿ 46 ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿರುವ 77ರ ವೃದ್ಧರೊಬ್ಬರು, ಮತ್ತೆ 47ನೇ ಬಾರಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಸಿದ್ಧರಾಗಿದ್ದಾರೆ. 
ಈ ಅಜ್ಜನಿಗೆ ಇನ್ನು ಪರೀಕ್ಷೆ ಬರೆಯುವ ಹುಮ್ಮಸ್ಸು. ಈಗಾಗಲೇ 46 ಬಾರಿ ಹತ್ತನೇ ತರಗತಿ ಫೇಲ್ ಆಗಿದ್ದರೂ, ಛಲ ಬಿಡದ ಅಜ್ಜ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಪಾಸ್ ಮಾಡಿಯೇ ತೀರುತ್ತೇನೆ ಎಂದು ಪಣ ತೊಟ್ಟಿದ್ದಾರೆ. 
ರಾಜಸ್ಥಾನದ ಖೋಹರಿ ಗ್ರಾಮದ ವೃದ್ಧ ಶಿವ ಚರಣ್ ಯಾದವ್ ಅವರು ಮಾರ್ಚ್ 10ರಂದು ನಡೆಯಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು 47ನೇ ಬಾರಿಗೆ ಬರೆಯಲು ಸಿದ್ಧರಾಗಿದ್ದಾರೆ. 
1968ರಲ್ಲಿ ಮೊದಲ ಬಾರಿಗೆ 10ನೇ ತರಗತಿ ಪರೀಕ್ಷೆಯನ್ನು ತೆಗೆದುಕೊಂಡಿದ್ದರು. ಅಂದಿನಿಂದ ಫೇಲ್ ಆಗುತ್ತಲೇ ಬಂದಿರುವ ಯಾದವ್ ಅವರಿಗೆ ಹಿಂದಿ ಮತ್ತು ಇಂಗ್ಲಿಷ್ ವಿಷಯಗಳು ಸವಾಲಾಗಿ ಪರಿಣಮಿಸಿದೆ. 
ಇವರ ಛಲವನ್ನು ಮೆಚ್ಚಿರುವ ಗ್ರಾಮಸ್ಥರು, ಅಜ್ಜನಿಗೆ ಪೆನ್ನು, ಪುಸ್ತಕವನ್ನು ಉಡುಗೊರೆಯನ್ನಾಗಿ ನೀಡಿದ್ದಾರೆ. ಅದಲ್ಲದೇ, ಈ ವೃದ್ಧ ಇನ್ನೊಂದು ಪಣ ತೊಟ್ಟಿದ್ದರು. 10ನೇ ತರಗೆತಿ ಉತ್ತೀರ್ಣವಾಗುವವರೆಗೆ ಮದುವೆಯಾಗುವುದಿಲ್ಲ ಎಂದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com