2017 ರ ಮಾರ್ಚ್ ವೇಳೆಗೆ 1.29 ಲಕ್ಷ ಗ್ರಾಮೀಣ ಅಂಚೆ ಕಚೇರಿಗಳ ಡಿಜಿಟಲೀಕರಣ

ಅಂಚೆ ಕಛೇರಿಗಳ ಆಧುನೀಕರಣದ ಭಾಗವಾಗಿ 2017 ರ ಮಾರ್ಚ್ ವೇಳೆಗೆ 129,323 ಗ್ರಾಮೀಣ ಅಂಚೆ ಕಚೇರಿಗಳನ್ನು ಡಿಜಿಟಲೀಕರಣಗೊಳಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಅಂಚೆ ಕಚೇರಿ
ಅಂಚೆ ಕಚೇರಿ

ನವದೆಹಲಿ: ಅಂಚೆ ಕಚೇರಿಗಳ ಆಧುನೀಕರಣದ ಭಾಗವಾಗಿ 2017 ರ ಮಾರ್ಚ್ ವೇಳೆಗೆ 129,323 ಗ್ರಾಮೀಣ ಅಂಚೆ ಕಚೇರಿಗಳನ್ನು ಡಿಜಿಟಲೀಕರಣಗೊಳಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಕೇಂದ್ರ ಸರ್ಕಾರ ರೂ 4 , 909 ರೂ ಗಳ ವೆಚ್ಚದಲ್ಲಿ ಅಂಚೆಕಚೇರಿಗಳ ಐಟಿ ಆಧುನೀಕರಣ ಯೋಜನೆಗೆ ಅನುಮೋದನೆ ನೀಡಿದ್ದು ದೇಶಾದ್ಯಂತ ಇರುವ 12 ,323 ಗ್ರಾಮೀಣ ಅಂಚೆ ಕಚೇರಿಗಳನ್ನು ಮುಂದಿನ ವರ್ಷದೊಳಗೆ ಡಿಜಿಟಲೀಕರಣಗೊಳಿಸಲಾಗುವುದು ಎಂದು ರಾಜ್ಯಸಭೆಗೆ ಸಂಪರ್ಕ ಮತ್ತು ಐಟಿ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.
ಅಂಚೆಕಚೇರಿಗಳ ಗಣಕೀಕರಣ ಹಾಗೂ ನೆಟ್ವರ್ಕಿಂಗ್ ಸಹ ಆಧುನೀಕರಣ ಯೋಜನೆಯ ಭಾಗವಾಗಿದೆ, ಗ್ರಾಮೀಣ ಪ್ರದೇಶಕ್ಕೆ ಅಗತ್ಯವಿರುವ ತಂತ್ರಾಂಶಗಳನ್ನು ಇನ್ ಫೋಸಿಸ್ ಸಂಸ್ಥೆ ಪೂರೈಸಲಿದ್ದು ಗ್ರಾಮೀಣ ವ್ಯವಸ್ಥೆಯನ್ನು ಒಂದುಗೂಡಿಸಲಿದೆ. ಡಿಜಿಟಲೀಕರಣ ಯೋಜನೆಯಿಂದ ಅಂಚೆಕಚೆರಿಗಳು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಸಕ್ರಿಯಗೊಂಡು, ಆರ್ಥಿಕ ವಹಿವಾಟು ಹೆಚ್ಚಾಗಲಿದೆ ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com