ಇಶ್ರಾತ್ ಜಹಾನ್ ಪ್ರಕರಣ: ಜಿಕೆ ಪಿಳ್ಳೈ ಎಲುಬಿಲ್ಲದ ಅಧಿಕಾರಿ ಎಂದ ಕಾಂಗ್ರೆಸ್

ಇಶ್ರತ್ ಜಹಾನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಮಾಹಿತಿಗಳನ್ನು ಹೊರಹಾಕಿದ್ದ ಗೃಹ ಇಲಾಖೆಯ ಮಾಜಿ ಕಾರ್ಯದರ್ಶಿ ಜಿಕೆ ಪಿಳ್ಳೈ ವಿರುದ್ಧ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ.
ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್, ಜಿಕೆ ಪಿಳ್ಳೈ
ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್, ಜಿಕೆ ಪಿಳ್ಳೈ

ನವದೆಹಲಿ: ಇಶ್ರಾತ್ ಜಹಾನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಮಾಹಿತಿಗಳನ್ನು  ಹೊರಹಾಕಿದ್ದ ಗೃಹ ಇಲಾಖೆಯ ಮಾಜಿ ಕಾರ್ಯದರ್ಶಿ ಜಿಕೆ ಪಿಳ್ಳೈ ವಿರುದ್ಧ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ.
ಜಿ ಕೆ ಪಿಳ್ಳೈ ನಂತಹ ಅಧಿಕಾರಿಗಳು ಸರ್ಕಾರ ಬದಲಾದಂತೆ ತಮ್ಮ ದೃಷ್ಟಿಕೋನಗಳನ್ನೂ ಬದಲಾವಣೆ ಮಾಡಿಕೊಳ್ಳುವುದು ಅಸಮಾಧಾನಕರ ಸಂಗತಿ ಎಂದು ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಹೇಳಿದ್ದಾರೆ. ಅಧಿಕಾರದಲ್ಲಿರುವಷ್ಟೂ ದಿನ ಸರ್ಕಾರ ಹೇಳಿದಂತೆಯೇ ಕೇಳುತ್ತಾರೆ. ನಿವೃತ್ತಿಯಾದ ಬಳಿಕ ಬದಲಾವಣೆಯಾದ ಸರ್ಕಾರಕ್ಕೆ ಅನುಗುಣವಾಗಿ ತಮ್ಮ ನಿಲುವುಗಳನ್ನು ಬದಲಾವಣೆ ಮಾಡಿಕೊಳ್ಳುತ್ತಾರೆ ಇದು ಜಿಕೆ ಪಿಳ್ಳೈ ಸೇರಿದಂತೆ ಭಾರತದ ಲಕ್ಷಾಂತರ ಅಧಿಕಾರಿಗಳ ಸಮಸ್ಯೆ ಎಂದು ಸಂದೀಪ್ ದೀಕ್ಷಿತ್ ಹೇಳಿದ್ದಾರೆ. 
ಭಾರತದಲ್ಲಿ ಅಧಿಕಾರಗಳು ಎಲುಬಿಲ್ಲದ, ಚಾರಿತ್ರ್ಯಹೀನವಾಗಿರುವುದಕ್ಕೆ ಇದೊಂದು ಉದಾಹರಣೆಯಾಗಿದೆ ಎಂದು ಸಂದೀಪ್ ದೀಕ್ಷಿತ್ ಹೇಳಿಕೆ ನೀಡಿದ್ದಾರೆ. ದೌರ್ಬಲ್ಯ ಮತ್ತು ಶಕ್ತಿಯ ಕೊರತೆ ಇರುವುದು ಪಿಳ್ಳೈ ಅವರಲ್ಲಿ ಮಾತ್ರವೆ ಹೊರತು ಅಧಿಕಾರಿಗಳ ವರ್ಗಕ್ಕೆ ಇದು ಸಾರ್ವತ್ರಿಕವಾಗಿ ಅನ್ವಯವಾಗುವುದಿಲ್ಲ ಎಂದು ಸಂದೀಪ್ ಅಭಿಪ್ರಾಯಪಟ್ಟಿದ್ದಾರೆ. " ಅದೇನೇ ಇರಲಿ ಪಿಳ್ಳೈ ಅವರನ್ನು ಒಬ್ಬ ಜವಾಬ್ದಾರಿಯುತ ಅಧಿಕಾರಿ ಎಂದು ತಿಳಿದಿದ್ದೆ, ಆದರೆ ಹಣದ, ಅಧಿಕಾರದ ದಾಹ ಅತಿಯಾಗಿದ್ದು ಇದೊಂದು ದುಃಖಕರ ಸಂಗತಿ" ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com