ಉಪ ಕುಲಪತಿಗಳ ನಡತೆ ಪ್ರಶ್ನಿಸಿದ್ದಕ್ಕಾಗಿ ನನ್ನ ವಿರುದ್ಧ ಕಿರುಕುಳ: ರಿಚಾ ಶರ್ಮ

ವಿಶ್ವ ವಿದ್ಯಾಲಯದ ಉಪಕುಲಪತಿಗಳ ನಡತೆಯನ್ನು ಮತ್ತು ವಿದ್ಯಾಲಯದಲ್ಲಿನ ಅರಾಜಕತೆಯನ್ನು ಪ್ರಶ್ನಿಸಿದ್ದಕ್ಕಾಗಿ ತಮ್ಮ ಮೇಲೆ ಆಡಳಿತ ಸಿಬ್ಬಂದಿ...
ಅಲಹಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಮಹಿಳಾ ಅಧ್ಯಕ್ಷೆ ರಿಚಾ ಶರ್ಮ
ಅಲಹಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಮಹಿಳಾ ಅಧ್ಯಕ್ಷೆ ರಿಚಾ ಶರ್ಮ
Updated on

ಅಲಹಾಬಾದ್: ವಿಶ್ವ ವಿದ್ಯಾಲಯದ ಉಪಕುಲಪತಿಗಳ ನಡತೆಯನ್ನು ಮತ್ತು ವಿದ್ಯಾಲಯದಲ್ಲಿನ ಅರಾಜಕತೆಯನ್ನು ಪ್ರಶ್ನಿಸಿದ್ದಕ್ಕಾಗಿ ತಮ್ಮ ಮೇಲೆ ಆಡಳಿತ ಸಿಬ್ಬಂದಿ ಕಿರುಕುಳ ನೀಡುತ್ತಿದ್ದಾರೆ ಎಂದು ಅಲಹಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಮಹಿಳಾ ಅಧ್ಯಕ್ಷೆ ರಿಚಾ ಶರ್ಮ ಆರೋಪಿಸಿದ್ದಾರೆ.

ಮೀಸಲು ವರ್ಗಕ್ಕೆ ಸೀಮಿತವಾದ ಸೀಟಿನಡಿ ರಿಚಾ ಶರ್ಮ ಅವರು ಸಂಶೋಧನಾ ವಿದ್ಯಾರ್ಥಿಯಾಗಿ ಪ್ರವೇಶ ಪಡೆದಿದ್ದರು ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ರಿಚಾ ಶರ್ಮ ವಿರುದ್ಧ ತನಿಖೆಗೆ ಆದೇಶಿಸಲಾಗಿತ್ತು. ''ವಿದ್ಯಾಲಯದ ಆಡಳಿತ ಸಿಬ್ಬಂದಿ ವಿಚಾರಣೆ ನೆಪದಲ್ಲಿ ಕಳೆದ ಆರು ತಿಂಗಳಿನಿಂದ ಕಿರುಕುಳ ನೀಡುತ್ತಿದ್ದಾರೆ. ಪ್ರತಿದಿನ ನೊಟೀಸು ಕಳುಹಿಸುವುದು, ನನ್ನ ಕೆಲಸವನ್ನು ಪ್ರಶ್ನಿಸುವುದು ಮಾಡುತ್ತಿದ್ದಾರೆ. ಅನಧಿಕೃತ ಆರೋಪಕ್ಕೆ ಸಂಬಂಧಪಟ್ಟಂತೆ ನನ್ನನ್ನು ವಿಶ್ವವಿದ್ಯಾಲಯದ ಹೊರಗೆ ಕಳುಹಿಸಲು ಯತ್ನಿಸುತ್ತಿದ್ದಾರೆ. ಈಗ ಅವರು ನನ್ನ ಪ್ರವೇಶ ವಿಧಾನವನ್ನು ಪ್ರಶ್ನಿಸುತ್ತಿದ್ದು, ಇದರಲ್ಲಿ ಕೆಲವು ಅಕ್ರಮ ನಡೆದಿದೆ ಎಂದು ರಿಚಾ ಶರ್ಮ ಆರೋಪಿಸಿದ್ದಾರೆ.

''ನನ್ನ ಪ್ರವೇಶ ಸಂದರ್ಭದಲ್ಲಿ ಸಂಪೂರ್ಣ ಪ್ರಕ್ರಿಯೆಗಳನ್ನು ಮಾಡಲಾಗಿದ್ದು, ಅದರಲ್ಲಿ ಯಾವುದೇ ಅಕ್ರಮಗಳು ನಡೆದಿಲ್ಲ. ಒಂದು ವೇಳೆ ಆಗಿದ್ದರೂ ಕೂಡ ಅದು ವಿಶ್ವವಿದ್ಯಾಲಯ ಕಡೆಯಿಂದ'' ಎಂದು ಹೇಳಿದ್ದಾರೆ.

ವಿದ್ಯಾಲಯದ ಈ ನಡತೆ ರಾಜಕೀಯ ಪ್ರೇರಿತವಾಗಿದೆ. ಉಪಕುಲಪತಿಗಳ ನಡತೆಯನ್ನು ಪ್ರಶ್ನಿಸಿದ್ದಕ್ಕಾಗಿ ಈ ರೀತಿ ಮಾಡಲಾಗುತ್ತಿದೆ. ವಿಶ್ವವಿದ್ಯಾಲಯದ ಆವರಣದ ಒಳಗೆ ನಡೆಯುವ ಅರಾಜಕತೆಯನ್ನು ಪ್ರಶ್ನಿಸಿದ್ದಕ್ಕಾಗಿ ನನ್ನನ್ನು ಗುರಿಯಾಗಿರಿಸಿಕೊಂಡು ಕಿರುಕುಳ ನೀಡಲಾಗುತ್ತಿದೆ ಎಂದು ರಿಚಾ ಶರ್ಮ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com