ನನಸಾಯಿತು ತೃತೀಯಲಿಂಗಿಯ ಉದ್ಯಮದ ಕನಸು

ತೃತೀಯ ಲಿಂಗಿಗಳಿಗೆ ಮಾದರಿಯಾಗುವಂತಹ ಉದಾಹರಣೆಯೊಂದು ಇಲ್ಲಿದೆ. ಕೇಟರಿಂಗ್ ಉದ್ಯಮ ಪ್ರಾರಂಭ ಮಾಡುವ ತೃತೀಯ ಲಿಂಗಿ ಆರ್ ಸುಜಾತ(30 ) ಕನಸು ನನಸಾಗಿದೆ.
ತೃತೀಯಲಿಂಗಿಗಳೊಂದಿಗೆ ಮಾತನಾಡುತ್ತಿರುವ ಭಾರತಿ ಫೌಂಡೇಷನ್ ನ ಉಪಾಧ್ಯಕ್ಷೆ(ಎಡಭಾಗ)
ತೃತೀಯಲಿಂಗಿಗಳೊಂದಿಗೆ ಮಾತನಾಡುತ್ತಿರುವ ಭಾರತಿ ಫೌಂಡೇಷನ್ ನ ಉಪಾಧ್ಯಕ್ಷೆ(ಎಡಭಾಗ)

ಚೆನ್ನೈ: ತೃತೀಯಲಿಂಗಿಗಳಿಗೆ ಮಾದರಿಯಾಗುವಂತಹ ಉದಾಹರಣೆಯೊಂದು ಇಲ್ಲಿದೆ. ಕೇಟರಿಂಗ್ ಉದ್ಯಮ ಪ್ರಾರಂಭ ಮಾಡುವ ತೃತೀಯ ಲಿಂಗಿ ಆರ್ ಸುಜಾತ(30 ) ಕನಸು ನನಸಾಗಿದೆ.
ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಯೋಜನೆಯಡಿ 3 ಲಕ್ಷ ರೂಪಾಯಿ ಸಾಲ ಪಡೆದಿರುವ ಸುಜಾತ ಕೇಟರಿಂಗ್ ಉದ್ಯಮ ಪ್ರಾರಂಭಿಸಿದ್ದಾರೆ. ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿರುವ ಅವರು " ನನ್ನ ತಂದೆಯಂತೆಯೇ ನಾನೂ ಸಹ ಕೆಟರಿಂಗ್ ಉದ್ಯಮ ಪ್ರಾರಂಭಿಸಬೇಕೆಂಬ ಕನಸು ಕಂಡಿದ್ದೆ. ನನ್ನ 6 ನೇ ವಯಸ್ಸಿನಿಂದಲೇ ತಂದೆಗೆ ಸಹಾಯ ಮಾಡುತ್ತಿದ್ದ ನಾನು ಶಾಲೆಯಿಂದ ಮನೆಗೆ ಬಂದ ಬೆನ್ನಲ್ಲೇ ಟೀ ಅಂಗಡಿಗೆ ಹೋಗಿ ತಂದೆಗೆ ನೆರವಾಗುತ್ತಿದೆ. ತಂದೆಯ ನಿಧನಾನಂತರ ಅಂಗಡಿಯನ್ನು ಮುಚ್ಚಬೇಕಾಯಿತು, ಆದರೆ ಮುಂದೊಂದು ದಿನ ನನ್ನದೇ ಆದ ಕೇಟರಿಂಗ್ ಉದ್ಯಮ ಪ್ರಾರಂಭಿಸಬೇಕೆಂಬ ಕನಸು ಹೊತ್ತಿದ್ದೆ". ಎಂದು ಹೇಳಿದ್ದಾರೆ.

ಬೆಳವಣಿಗೆ ಹಂತದಲ್ಲಿ ಉಂಟಾದ ಜೈವಿಕ ಬದಲಾವಣೆಗಳ ಪರಿಣಾಮ ಸುಜಾತ ತೃತೀಯ ಲಿಂಗಿಯಾಗಿ ಮಾರ್ಪಾಡಾಗಬೇಕಾಯಿತು. ಅವಮಾನ ಸಹಿಸಲಾಹದೆ 10 ನೇ ತರಗತಿಗೆ ಶಾಲೆಯನ್ನು ತೊರೆಯಬೇಕಾದ ಪರಿಸ್ಥಿತಿ ಎದುರಾಯಿತು. ಇಷ್ಟೇ ಅಲ್ಲ ಸುಜಾತಾಳ ಈ ಪರಿಸ್ಥಿತಿ ಆಕೆಯ ಹಿರಿಯ ಸಹೋದರಿ ಮದುವೆ ಮೇಲೆ ಪರಿಣಾಮ ಬೀರುವ ಆತಂಕ ವ್ಯಕ್ತವಾದ್ದರಿಂದ ಸುಜಾತ ಮನೆಯನ್ನೂ ತೊರೆದರು. ಇಷ್ಟೆಲ್ಲಾ ಆದ ನಂತರವೂ ಧೃತಿಗೆಡದೆ, ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ಖಾಸಗಿ ಕೇಂದ್ರವೊಂದರಿಂದ ಸೋಶಿಯಲ್ ಇನಿಷಿಯೇಟಿವ್ ಮ್ಯಾನೇಜ್ ಮೆಂಟ್ ವಿಷಯದಲ್ಲಿ ಡಿಪ್ಲೊಮಾ ಪದವಿ ಪಡೆದು ತೃತೀಯ ಲಿಂಗಿಗಳ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿರುವ ಎನ್ ಜಿಒ ನಲ್ಲಿ ಸಕ್ರಿಯರಾದರು.  "ತಿಂಗಳಿಗೆ ಬರುತ್ತಿದ್ದ 8000 ಸಾವಿರ ರೂಪಾಯಿಯಿಂದ ಜೀವನ ನಿರ್ವಹಣೆ ಸಾಧ್ಯವಿರಲಿಲ್ಲ, ಇದೇ ವೇಳೆಗೆ ಎನ್ ಜಿ ಒ ದೊಂದಿಗಿನ ಒಪ್ಪಂದವೂ ಮೂರು ತಿಂಗಳಲ್ಲಿ ಮುಗಿಯುವುದಿತ್ತು. ಈ ಹಂತದಲ್ಲಿ ಸುಜಾತಾಗೆ ನೆರವಾಗಿದ್ದು ಚೆನ್ನೈ ನ ಪೊಲೀಸರು ನಡೆಸಿದ ಉದ್ಯೋಗ ಮೇಳ. " ಚೆನ್ನೈ ಪೊಲೀಸರು ನಡೆಸಿದ ಉದ್ಯೋಗ ಮೇಳದಲ್ಲಿ ಭಾರತಿ ಫೌಂಡೇಷನ್ ನೆರವಿನಿಂದ ಬ್ಯಾಂಕ್ ನಲ್ಲಿ ಸಾಲ ಪಡೆದು ಕೇಟರಿಂಗ್ ಉದ್ಯಮ ಪ್ರಾರಂಭಿಸಿದೆ. ಉದ್ಯೋಗ ಮೇಳದಿಂದ ನನಗೆ ಹಾಗೂ ನನ್ನಂತಹ ಅನೇಕರಿಗೆ ಅನುಕೂಲವಾಗಿದೆ ಎಂದು ಸುಜಾತ ಹೇಳಿದ್ದಾರೆ. ಸುಜಾತ ಅವರೊಂದಿಗೆ ಇನ್ನೂ ಮೂವರು ತೃತೀಯ ಲಿಂಗಿಗಳಿಗೆ ಉದ್ಯೋಗ ಮೇಳದಿಂದ ಸಹಯಾವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com