
ನವದೆಹಲಿ: ಅಲೀಘರ್ ಮುಸ್ಲಿಂ ವಿವಿಯ(ಎಎಂಯು) ಕೇಂದ್ರಗಳನ್ನು ಮಾನವ ಸಂಪನ್ಮೂಲ ಇಲಾಖೆ ಕಾನೂನು ಬಾಹಿರ ಎಂದು ಗುರುತಿಸಿದ್ದ ವಿಷಯದ ಕುರಿತು ಎಎಂಯು ನ ಉಪಕುಲಪತಿ, ನಿವೃತ್ತ ಲೆಫ್ಟಿನೆಂಟ್ ಜನರಲ್ ಜಮೀರ್ ಉದ್ದೀನ್ ಶಾ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಸ್ಪಷ್ಟನೆ ನೀಡಿದ್ದಾರೆ.
" ಮಾನವ ಸಂಪನ್ಮೂಲ ಇಲಾಖೆ ಕಾನೂನು ಬಾಹಿರ ಎಂದು ಗುರುತಿಸಿರುವ ಕೇರಳ, ಪಶ್ಚಿಮ ಬಂಗಾಳ, ಬಿಹಾರ ಕೇಂದ್ರಗಳನ್ನು ಕೇಂದ್ರ ಸರ್ಕಾರ ಹಾಗೂ ರಾಷ್ಟ್ರಪತಿಗಳೇ ಮಂಜೂರು ಮಾಡಿದ್ದು ಕಾನೂನು ಬಾಹಿರ ಎಂದು ಹೇಳಲು ಹೇಗೆ ಸಾಧ್ಯ"? ಎಂದು ಶಾ ಪ್ರಶ್ನಿಸಿದ್ದಾರೆ.
ಐದು ಜನರ ನಿಯೋಗದೊಂದಿಗೆ ಪ್ರಧಾನಿ ಅವರನ್ನು ಭೇಟಿ ಮಾಡಿದ್ದ ಜಮೀರ್ ಉದ್ದೀನ್ ಶಾ, ವಿಶ್ವವಿದ್ಯಾನಿಯದಲ್ಲಿ ಗಂಗಾ ನದಿ ಪುನರುಜ್ಜೀವನ ಹಾಗೂ ಕೃಷಿ ತಂತ್ರಜ್ಞಾನ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸಂಶೋಧನೆ ನಡೆಯುತ್ತಿರುವುದರ ಬಗ್ಗೆ ಜಮೀರ್ ಉದ್ದೀನ್ ಶಾ ಪ್ರಧಾನಿ ಮೋದಿಗೆ ಮಾಹಿತಿ ನೀಡಿದ್ದಾರೆ.
ಹಲವು ಬಾರಿ ಯತ್ನಿಸಿದರು ಮಾನವ ಸಂಪನ್ಮೂಲ ಇಲಾಖೆ ಸಚಿವೆ ಸ್ಮೃತಿ ಇರಾನಿ ಅವರನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ, ಮಾರ್ಚ್.10 ರಂದು ಭೇಟಿಗೆ ಅವಕಾಶ ನೀಡಲಾಗಿದ್ದು, ಇದು ಸ್ಮೃತಿ ಇರಾನಿ ಅವರು ಅಧಿಕಾರ ಸ್ವೀಕರಿಸಿದಾಗಿನಿಂದ ನಡೆಯಲಿರುವ ಎರಡನೇ ಭೇಟಿ ಎಂದು ಜಮೀರ್ ಉದ್ದೀನ್ ಶಾ ಪ್ರಧಾನಿಗೆ ತಿಳಿಸಿದ್ದಾರೆ.
Advertisement