ಚಿದಂಬರಂ
ದೇಶ
ನನ್ನ ಮಗನೆಂಬ ಕಾರಣಕ್ಕೆ ಕಾರ್ತಿಯನ್ನು ಟಾರ್ಗೆಟ್ ಮಾಡಲಾಗ್ತಿದೆ: ಚಿದಂಬರಂ
ನನ್ನ ಮಗನೆಂಬ ಏಕೈಕ ಕಾರಣಕ್ಕೆ ಕಾರ್ತಿ ಚಿದಂಬರಂನನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಆದರೆ ನಿಜವಾದ ಟಾರ್ಗೆಟ್ ನಾನು ಎಂದು ಮಾಜಿ ಹಣಕಾಸು ಸಚಿವ...
ನವದೆಹಲಿ: ನನ್ನ ಮಗನೆಂಬ ಏಕೈಕ ಕಾರಣಕ್ಕೆ ಕಾರ್ತಿ ಚಿದಂಬರಂನನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಆದರೆ ನಿಜವಾದ ಟಾರ್ಗೆಟ್ ನಾನು ಎಂದು ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಹೇಳಿದ್ದಾರೆ.
ಇದೇ ವೇಳೆ ನನ್ನ ಮಗ ಕಾರ್ತಿ ವಿದೇಶಗಳಲ್ಲಿ ಕಾನೂನು ಬಾಹಿರವಾಗಿ ಯಾವುದೇ ಆಸ್ತಿ ಹೊಂದಿಲ್ಲ ಎಂದು ಚಿದಂಬರಂ ಸ್ಪಷ್ಟಪಡಿಸಿದ್ದಾರೆ. 14 ದೇಶಗಳಲ್ಲಿ ಕಾರ್ತಿ ಅಕ್ರಮವಾಗಿ ಆಸ್ತಿ ಸಂಪಾದಿಸಿದ್ದಾರೆ ಜತೆಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದಾರೆ ಎಂಬ ಆರೋಪವಿದೆ.
ಕಾರ್ತಿ ಅಕ್ರಮ ಆಸ್ತಿ ಹೊಂದಿದ್ದಾನೆ ಎಂಬ ಮಾಹಿತಿ ಕೇಂದ್ರ ಸರ್ಕಾರದ ಬಳಿ ಇದ್ದರೆ ಅದರ ಪಟ್ಟಿ ಸಿದ್ಧ ಪಡಿಸಲಿ, ಅದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನೂ ಹಾಜರು ಪಡಿಸಲಾಗುವುದು. ಕಾರ್ತಿ ನಡೆಸುತ್ತಿರುವ ಉದ್ದಿಮೆ ಮತ್ತು ಆತ ಹೊಂದಿರುವ ಎಲ್ಲಾ ಆಸ್ತಿಗಳು ಕಾನೂನು ಬದ್ಧವಾಗಿವೆ ಎಂದು ಚಿದಂಬರಂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ