ಕೇವಲ ಶ್ರೀಮಂತರು ಮತ್ತು ಪ್ರಸಿದ್ಧ ವ್ಯಕ್ತಿಗಳು ಅಸಹಿಷ್ಣುತೆ ಬಗ್ಗೆ ಮಾತನಾಡುತ್ತಾರೆ: ಅನುಪಮ್ ಖೇರ್

ನಮ್ಮ ದೇಶದಲ್ಲಿ ಕೇವಲ ಶ್ರೀಮಂತ ಮತ್ತು ಸುಪ್ರಸಿದ್ಧ ಜನರು ಮಾತ್ರ ಅಸಹಿಷ್ಣುತೆ ಬಗ್ಗೆ ಮಾತನಾಡುತ್ತಾರೆ. ಬಡವರು ತಮ್ಮ ಜೀವನ...
ಅನುಪಮ್ ಖೇರ್ (ಸಂಗ್ರಹ ಚಿತ್ರ)
ಅನುಪಮ್ ಖೇರ್ (ಸಂಗ್ರಹ ಚಿತ್ರ)

ಕೋಲ್ಕತ್ತಾ: ನಮ್ಮ ದೇಶದಲ್ಲಿ ಕೇವಲ ಶ್ರೀಮಂತ ಮತ್ತು ಸುಪ್ರಸಿದ್ಧ ಜನರು ಮಾತ್ರ ಅಸಹಿಷ್ಣುತೆ ಬಗ್ಗೆ ಮಾತನಾಡುತ್ತಾರೆ. ಬಡವರು ತಮ್ಮ ಜೀವನ ನಿರ್ವಹಣೆಯಲ್ಲಿ ತೊಡಗಿರುತ್ತಾರೆ ಎಂದು ಬಾಲಿವುಡ್ ನಟ ಅನುಪಮ್ ಖೇರ್ ಹೇಳಿದ್ದಾರೆ. ಅಲ್ಲದೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧವೂ ಲೇವಡಿ ಮಾಡಿದ್ದಾರೆ.

ಕೋಲ್ಕತ್ತಾದಲ್ಲಿ ಟೆಲಿಗ್ರಾಫ್ ರಾಷ್ಟ್ರೀಯ ಚರ್ಚಾ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂಬ ಬಗ್ಗೆ ದೇಶವ್ಯಾಪಿ ಚರ್ಚೆಗಳೇನು ನಡೆಯುತ್ತಿಲ್ಲ. ಅಸಂಬದ್ಧ ಬಲಪಂಥೀಯ ಅಂಶಗಳನ್ನು ಬಿಂಬಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂಬ ವಿರೋಧ ಪಕ್ಷಗಳ ಆರೋಪವನ್ನು ಕೂಡ ಅವರು ನಿರಾಕರಿಸಿದ್ದಾರೆ.

ಇದೊಂದು ಚರ್ಚಾಸ್ಪದ ವಿಷಯವೇ ಅಲ್ಲ. ಕೇವಲ ಶ್ರೀಮಂತರು ಮಾತ್ರ ಅಸಹಿಷ್ಣುತೆ ಬಗ್ಗೆ ಮಾತನಾಡುತ್ತಾರೆ. ರಸ್ತೆಯಲ್ಲಿ ಹೋಗುವವನೊಬ್ಬನಲ್ಲಿ ಅಸಹಿಷ್ಣುತೆ ಬಗ್ಗೆ ಕೇಳಿ, ಏನೂ ಹೇಳುವುದಿಲ್ಲ. ಅವರಿಗೆ ಬೇಕಾಗಿರುವುದು ದಿನಕ್ಕೆ ಎರಡು ಹೊತ್ತಿನ ಊಟವಷ್ಟೆ ಎಂದು ಹೇಳಿದರು.

ಕೈಯಲ್ಲಿ ಶಾಂಪೇನು ಗ್ಲಾಸು ಹಿಡಿದುಕೊಳ್ಳುವವರು ಮಾತ್ರ ಅಸಹಿಷ್ಣುತೆ ಎಂದು ಮಾತನಾಡಿಕೊಳ್ಳುತ್ತಾರೆ.ನೀವು ಭಾರತದಲ್ಲಿ ವಾಸಿಸುತ್ತಿದ್ದೀರಾ ಇಲ್ಲ ಅಮೆರಿಕದಲ್ಲಿಯೇ ಎಂದು ಖೇರ್ ಪ್ರಶ್ನಿಸಿದರು.

ನಮ್ಮ ದೇಶದಲ್ಲಿ ಅಸಹಿಷ್ಣುತೆ ಉಂಟಾಗಿದ್ದು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ, ಸರ್ಕಾರದ ವಿರುದ್ಧ ಮಾತನಾಡಿದವರನ್ನು ಜೈಲಿಗೆ ಕಳುಹಿಸುತ್ತಿದ್ದರಲ್ಲವೇ ಅದು ಅಸಹಿಷ್ಣುತೆ ಎಂದು ಅನುಪಮ್ ಖೇರ್ ಅಭಿಪ್ರಾಯಪಟ್ಟರು.

ರಾಹುಲ್ ಗಾಂಧಿಯವರನ್ನು ಪರೋಕ್ಷವಾಗಿ ಲೇವಡಿ ಮಾಡಿದ ಅನುಪಮ್ ಖೇರ್, ಭಾರತದಲ್ಲಿ ಕಾಂಗ್ರೆಸ್ ಪಕ್ಷ ತುಂಬಾ ಸಹಿಷ್ಣುವಾಗಿದೆ ಏಕೆಂದರೆ ಈ ದೇಶದ ಪ್ರಧಾನಿಯಾಗಬೇಕೆಂದು ಅವರು ಬಿಂಬಿಸುವ ವ್ಯಕ್ತಿಯನ್ನು ಅವರು ಸಹಿಸುತ್ತಾ ಬಂದಿದ್ದಾರೆ. ನೀವು ಅವರನ್ನು ಸಹಿಸಿಕೊಂಡಿದ್ದೀರಿ ಎಂದರೆ ಈ ಪ್ರಪಂಚದಲ್ಲಿ ಯಾವದನ್ನು ಬೇಕಾದರೂ ಸಹಿಸಬಹುದು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com