ರಾಷ್ಟ್ರಧ್ವಜ ಸುಡುವುದು, ದೇಶವಿರೋಧಿ ಘೋಷಣೆ ಕೂಗುವುದರಲ್ಲಿ ತಪ್ಪಿಲ್ಲ: ಪಪ್ಪು ಯಾದವ್

ವಿವಾದಗಳಿಂದಲೇ ಸುದ್ದಿಯಲ್ಲಿರುವ ಬಿಹಾರ ನಾಯಕ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪಪ್ಪು ಯಾದವ್
ಪಪ್ಪು ಯಾದವ್

ಪಾಟ್ನ: ವಿವಾದಗಳಿಂದಲೇ ಸುದ್ದಿಯಲ್ಲಿರುವ ಬಿಹಾರ ನಾಯಕ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಭಾರತದ ಧ್ವಜವನ್ನು ಸುಡುವುದು ತಪ್ಪಲ್ಲ ಭಾರತವಿರೋಧಿ ಘೋಷಣೆ ಕೂಗುವುದು ಅಪರಾಧವಲ್ಲ ಎಂದು ಹೇಳಿದ್ದಾರೆ. ಆರ್ ಜೆಡಿ ಪಕ್ಷ ತೊರೆದ ನಂತರ ಜನ್ ಅಧಿಕಾರ್ ಪಕ್ಷದ ಮುಖ್ಯಸ್ಥನಾಗಿರುವ ಪಪ್ಪು ಯಾದವ್ 5 ಬಾರಿ ಸಂಸತ್ ಗೆ ಆಯ್ಕೆಯಾಗಿದ್ದಾರೆ.

ಇದೇ ವೇಳೆ ಬಡವರು ದೇವಸ್ಥಾನಕ್ಕೆ ಹೋಗಬಾರದೆಂದು ಕರೆ ನೀಡಿರುವ ಪಪ್ಪು ಯಾದವ್ ಎಲ್ಲಾ ಹಿಂದೂ ಸಂತರು ದೇಶದ್ರೋಹಿಗಳು, ಅಂತಹವರಿಂದ ವಂಚನೆಗೊಳಗಾಗುವುದನ್ನು ತಪ್ಪಿಸಲು ಬಡವರು ದೇವಸ್ಥಾನಗಳಿಗೆ ಹೋಗಬಾರದು ಎಂದು ಪಪ್ಪು ಯಾದವ್ ಹೇಳಿದ್ದಾರೆ.
ಪಪ್ಪು ಯಾದವ್ ಹೇಳಿಕೆಯನ್ನು ಬಿಜೆಪಿ ನಾಯಕರು ಖಂಡಿಸಿದ್ದಾರೆ.

ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಪಪ್ಪು ಯಾದವ್ ಅವರ ಪತ್ನಿ ಕಾಂಗ್ರೆಸ್ ನ ಸಂಸದೆಯಾಗಿದ್ದಾರೆ. ಪಪ್ಪು ಯಾದವ್ ನನ್ನು ಆರ್ ಜೆಡಿಯಿಂದ ಕಳೆದ ವರ್ಷ ಉಚ್ಚಾಟನೆ ಮಾಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com