ಅತ್ಯಾಚಾರದ ಸುಳ್ಳು ಆರೋಪ ಹೊರಿಸಿದ್ದ ಪೊಲೀಸ್, ವಕೀಲನಿಗೆ 4 ವರ್ಷ ಜೈಲು ಶಿಕ್ಷೆ!

ವ್ಯಕ್ತಿಯೊಬ್ಬನ ಮೇಲೆ ಅತ್ಯಾಚಾರದ ಸುಳ್ಳು ಆರೋಪ ಹೊರಿಸಿದ್ದ ಓರ್ವ ಸಬ್ ಇನ್ಸ್ ಪೆಕ್ಟರ್ ಹಾಗೂ ಓರ್ವ ವಕೀಲನಿಗೆ ನವದೆಹಲಿಯ ನ್ಯಾಯಾಲಯ 4 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಅತ್ಯಾಚಾರದ ಸುಳ್ಳು ಆರೋಪ ಹೊರಿಸಿದ್ದ ಪೊಲೀಸ್, ವಕೀಲನಿಗೆ 4 ವರ್ಷ ಜೈಲು ಶಿಕ್ಷೆ!
ಅತ್ಯಾಚಾರದ ಸುಳ್ಳು ಆರೋಪ ಹೊರಿಸಿದ್ದ ಪೊಲೀಸ್, ವಕೀಲನಿಗೆ 4 ವರ್ಷ ಜೈಲು ಶಿಕ್ಷೆ!

ನವದೆಹಲಿ: ವ್ಯಕ್ತಿಯೊಬ್ಬನ ಮೇಲೆ ಅತ್ಯಾಚಾರದ ಸುಳ್ಳು ಆರೋಪ ಹೊರಿಸಿದ್ದ  ಓರ್ವ ಸಬ್ ಇನ್ಸ್ ಪೆಕ್ಟರ್ ಹಾಗೂ ಓರ್ವ ವಕೀಲನಿಗೆ ದೆಹಲಿಯ ನ್ಯಾಯಾಲಯ 4 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಅತ್ಯಾಚಾರದ ಆರೋಪಿಯಾಗಿದ್ದ ವ್ಯಕ್ತಿಯ ಮೇಲೆ ಸುಳ್ಳು ಆರೋಪ ಹೊರಿಸಲಾಗಿದ್ದು ಇದು ಸೇಡು ತೀರಿಸಿಕೊಳ್ಳಲು ರೂಪಿಸಲಾಗಿರುವ ಕುತಂತ್ರ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಅತ್ಯಾಚಾರದ ಆರೋಪ ಹೊತ್ತಿದ್ದ ವ್ಯಕ್ತಿ ಸಹ ಪೊಲೀಸ್ ಅಧಿಕಾರಿಯಾಗಿದ್ದಾರೆ.

ಪೊಲೀಸ್ ಹಾಗೂ ವಕೀಲರು ನ್ಯಾಯ ವಿತರಣೆ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಆರಕ್ಷಕರೇ ನಾಶಕರಾದಾಗ ನ್ಯಾಯಾಲಯಗಳೇ ದೃಢವಾಗಿ ಪ್ರತಿಕ್ರಿಯಿಸಬೇಕಾಗುತ್ತದೆ. ನ್ಯಾಯ ಒದಗಿಸಬೇಕಾದವರೇ ಷಡ್ಯಂತ್ರ ರೂಪಿಸಿರುವುದಕ್ಕೆ ಕೋರ್ಟ್ ಇಬ್ಬರು ಅಪರಾಧಿಗಳಿಗೆ ಛಿಮಾರಿ ಹಾಕಿದೆ.

ಪೊಲೀಸ್ ಅಧಿಕಾರಿಯಾಗಿದ್ದ ಸುಶೀಲ್ ಗುಲಾಟಿ ಅವರ ಪತ್ನಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದಲ್ಲಿ ಪೊಲೀಸ್ ಅಧಿಕಾರಿಯೊಬ್ಬ ಅಮಾನತುಗೊಂಡಿದ್ದ. ತನ್ನನ್ನು ಅಮಾನತುಗೊಳಿಸಿದ್ದ ಹಿನ್ನೆಲೆಯಲ್ಲಿ ಪ್ರತೀಕಾರ ತೀರಿಸಿಕೊಳ್ಳಲು ಅಮಾನತುಗೊಂಡಿದ್ದ ಪೊಲೀಸ್ ಅಧಿಕಾರಿ, ಓರ್ವ ವಕೀಲ ಹಾಗೂ ಕೋರ್ಟ್ ನ ಸಿಬ್ಬಂದಿ ಸಹಾಯ ಪಡೆದು ಸುಶೀಲ್ ಗುಲಾಟಿ ವಿರುದ್ಧ ಅತ್ಯಾಚಾರದ ಸುಳ್ಳು ಆರೋಪ ಹೊರಿಸಿದ್ದ. ಸುಶೀಲ್ ಗುಲಾಟಿ ಅವರು ಅತ್ಯಾಚಾರ ಪ್ರಕರಣದ ಸಂಬಂಧ 4 ತಿಂಗಳಲು ಜೈಲಿನಲ್ಲಿದ್ದರು ಹಾಗೂ ತೀರ್ಪು ಬರುವುದಕ್ಕೂ ಮುನ್ನವೇ ಸಾವನ್ನಪ್ಪಿದ್ದರು.

ಅನಕ್ಷರಸ್ಥರು ಇಂತಹ ತಪ್ಪು ಮಾಡಿದರೆ ಕ್ಷಮಿಸಬಹುದು, ಆದರೆ ಸುಶಿಕ್ಷಿತರು ಅದರಲ್ಲೂ ನ್ಯಾಯವನ್ನು ರಕ್ಷಿಸಬೇಕಾದವರೇ ಇಂತಹ ಕೀಳು ಮಟ್ಟದ ಪಿತೂರಿ ನಡೆಸಿದರೆ ಅದನ್ನು ಸಹಿಸಲು ಸಾಧ್ಯವಾಗುವುದಿಲ್ಲ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.
ಪೊಲೀಸ್ ಅಧಿಕಾರಿ ವಿರುದ್ಧ ಪಿತೂರಿ ನಡೆಸಿದ್ದ ಸಬ್ ಇನ್ಸ್ ಪೆಕ್ಟರ್ ಹಾಗೂ ವಕೀಲನಿಗೆ 4 ವರ್ಷಗಳ ಜೈಲು ಶಿಕ್ಷೆ ವಿಧಿಸಿರುವ ಕೋರ್ಟ್ 1 .5 ಲಕ್ಷ ರೂ ದಂಡವನ್ನೂ ವಿಧಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com