
ಮುಂಬೈ: ಗೋಹತ್ಯೆ ನಿಷೇಧದ ಬಗ್ಗೆ ಮಾತಾಡಿದರೆ ನಾನು ಕೆಲಸ ಕಳೆದುಕೊಳ್ಳಬೇಕಾಗಬಹುದು ಎಂದು ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್ ಹೇಳಿದ್ದಾರೆ.
ಮುಂಬೈ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದದ ವೇಳೆ ಮಾತನಾಡಿದ ಅವರು ಈ ರೀತಿ ಹೇಳಿದರು. ಗೋಹತ್ಯೆ ನಿಷೇಧ ನಮ್ಮ ದೇಶದ ಹಳ್ಳಿಗಳಲ್ಲಿ ವಾಸಿಸುತ್ತಿರುವ ಜನರ ಆದಾಯದ ಮೇಲೆ ಪರಿಣಾಮ ಬೀರುತ್ತದೆಯೇ ಎಂದು ವಿದ್ಯಾರ್ಥಿಗಳು ಪ್ರಶ್ನೆ ಕೇಳಿದಾಗ, ಗೋಹತ್ಯೆ ವಿಷಯಕ್ಕೆ ಸಂಬಂಧಿಸಿದಂತೆ ನಾನು ಮಾತನಾಡಿದರೆ ನನ್ನ ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಎಂದಾಗ ಅಲ್ಲಿದ್ದವರೆಲ್ಲ ನಗೆಗಡಲಲ್ಲಿ ತೇಲಿದರು.
ಸಾಮಾಜಿಕ ಬಿರುಕುಗಳಿಗೆ ನೀವು ಪ್ರತಿಕ್ರಿಯಿಸುವ ರೀತಿಯೂ ದೇಶದ ಆರ್ಥಿಕ ಅಭಿವೃದ್ಧಿ ಮೇಲೆ ಮಾರಕ ಪರಿಣಾಮ ಉಂಟುಮಾಡುತ್ತದೆ. ಇದಕ್ಕೆ ನಮ್ಮ ದೇಶವೇ ಉದಾಹರಣೆ. ಮೀಸಲಾತಿಯಿಂದ ಯಾರಿಗೆ ಪ್ರಯೋಜನವಾಗಿದೆ, ಯಾರಿಗೆ ಆಗಿಲ್ಲ, ಯಾವ ಧರ್ಮ ಏನು ಮಾಡಿದೆ, ಮಾಡಿಲ್ಲ ಎಂಬಂತಹ ಸಾಮಾನ್ಯ ತತ್ವಗಳು ಅಭಿವೃದ್ಧಿ ಮೇಲೆ ಭಾರೀ ಪ್ರಭಾವ ಬೀರುತ್ತಿವೆ ಎಂದು ಸುಬ್ರಮಣಿಯನ್ ಹೇಳಿದ್ದಾರೆ.
Advertisement