ಧೋನಿಯನ್ನು ಟ್ರೋಲ್ ಮಾಡಿದ್ದಕ್ಕೆ 20 ಬಾಂಗ್ಲಾ ವೆಬ್ ಸೈಟ್ ಗಳು ಹ್ಯಾಕ್!

ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಏಷ್ಯಾಕಪ್ ಟಿ20 ಫೈನಲ್ ವೇಳೆ ಸಾಮಾಜಿಕ ಜಾಲತಾಣಗಳಿಗೆ ಮಾತ್ರ ಸೀಮಿತವಾಗಿದ್ದ ಉಭಯ ದೇಶಗಳ ಅಭಿಮಾನಿಗಳ ಸಮರ ಈಗ ಸೈಬರ್ ಸ್ಪೇಸ್ ಗೂ ತಲುಪಿದೆ.
ಧೋನಿಯನ್ನು ಟ್ರೋಲ್ ಮಾಡಿದ್ದಕ್ಕೆ 20 ಬಾಂಗ್ಲಾ ವೆಬ್ ಸೈಟ್ ಗಳು ಹ್ಯಾಕ್!
ಧೋನಿಯನ್ನು ಟ್ರೋಲ್ ಮಾಡಿದ್ದಕ್ಕೆ 20 ಬಾಂಗ್ಲಾ ವೆಬ್ ಸೈಟ್ ಗಳು ಹ್ಯಾಕ್!

ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಏಷ್ಯಾಕಪ್ ಟಿ20 ಫೈನಲ್ ವೇಳೆ ಸಾಮಾಜಿಕ ಜಾಲತಾಣಗಳಿಗೆ ಮಾತ್ರ ಸೀಮಿತವಾಗಿದ್ದ ಉಭಯ ದೇಶಗಳ ಅಭಿಮಾನಿಗಳ ಸಮರ ಈಗ ಸೈಬರ್ ಸ್ಪೇಸ್ ಗೂ ತಲುಪಿದೆ.
ಎಂಎಸ್ ಧೋನಿ ಅವರ ರುಂಡವನ್ನು ಬಾಂಗ್ಲಾದೇಶದ ವೇಗಿ ಟಸ್ಕಿನ್ ಅಹ್ಮದ್ ಅವರು ಹಿಡಿದಿರುವ ಫೊಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಕ್ಕಾಗಿ ವೆಬ್ ಸೈಟ್ ಹ್ಯಾಕ್ ಮಾಡಿರುವುದಾಗಿ ಕೇರಳ ಸೈಬರ್ ವಾರಿಯರ್ಸ್ ಎಂಬ ಹೆಸರಿನ ಹ್ಯಾಕರ್ ಗಳು  ಹೇಳಿದ್ದಾರೆ. ಬಾಂಗ್ಲಾದೇಶದ ಸರ್ಕಾರಿ ವೆಬ್ ಸೈಟ್ ಗಳೂ ಸೇರಿ ಒಟ್ಟು 20 ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡಿದ್ದಾರೆ.
ಕೇರಳ ವಾರಿಯರ್ಸ್ ಎಂಬ ತಂಡ ಕೆಲವೇ ಗಂಟೆಗಳಲ್ಲಿ ಬಾಂಗ್ಲಾದೇಶದ ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡಿದ್ದಾರೆ. ಎಂಎಸ್ ಧೋನಿ ಅವರ ಫೋಟೊ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಲಾಗಿದ್ದಕ್ಕೆ 20 ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡಿದ್ದೇವೆ ಎಂದು ಕೇರಳ ವಾರಿಯರ್ಸ್ ತಂಡ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com