ಲುಟಿಯನ್ ಬಂಗಲೆಗಳಲ್ಲಿ ಅನಧಿಕೃತ ವಾಸವಿದ್ದವರನ್ನು ದಾಖಲೆ ಪ್ರಮಾಣದಲ್ಲಿ ತೆರವುಗೊಳಿಸಿದ ಮೋದಿ ಸರ್ಕಾರ

ಕೇಂದ್ರ ಸರ್ಕಾರ, ದೆಹಲಿಯ ಲುಟಿಯನ್ ಪ್ರದೇಶದ ವಿಐಪಿ ಬಂಗಲೆಗಳಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಬಹುತೇಕ ಜನರನ್ನು ತೆರವುಗೊಳಿಸಿದೆ.
ನರೇಂದ್ರ ಮೋದಿ
ನರೇಂದ್ರ ಮೋದಿ

ನವದೆಹಲಿ: ಕೇಂದ್ರ ಸರ್ಕಾರ, ದೆಹಲಿಯ ಲುಟಿಯನ್ ಪ್ರದೇಶದ ವಿಐಪಿ ಬಂಗಲೆಗಳಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಬಹುತೇಕ ಜನರನ್ನು ತೆರವುಗೊಳಿಸಿದೆ.
ಲುಟಿಯನ್ ಪ್ರದೇಶದ ವಿಐಪಿ ಬಂಗಲೆಗಳಲ್ಲಿ ತಮ್ಮ ಅವಧಿ ಮುಕ್ತಾಯಗೊಂಡರೂ ಸರ್ಕಾರದ ಸವಲತ್ತುಗಳನ್ನು ಬಳಸಿಕೊಂಡು ಅಕ್ರಮವಾಗಿ ವಾಸಿಸುತ್ತಿದ್ದರು. ನಗರಾಭಿವೃದ್ಧಿ ಇಲಾಖೆಯ ಅಧಿಕೃತ ಮಾಹಿತಿ ಪ್ರಕಾರ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಅಕ್ರಮವಾಗಿ ವಾಸಿಸುತ್ತಿದ್ದವರನ್ನು ದಾಖಲೆ ಪ್ರಮಾಣದಲ್ಲಿ( ಹೆಚ್ಚು ಜನರನ್ನು) ಹೊರಹಾಕಿದೆ.

ಕಳೆದ ಮೂರು ವರ್ಷಗಳಲ್ಲಿ ಒಟ್ಟು 1 ,531 ಮನೆಗಳನ್ನು ತೆರವುಗೊಳಿಸಲಾಗಿದೆ. 2013ರಲ್ಲಿ 246, 2014 ರಲ್ಲಿ 539  ಹಾಗೂ 2015 ರಲ್ಲಿ 746 ಮನೆಗಳನ್ನು ತೆರವುಗೊಳಿಸಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆಯ ರಾಜ್ಯ ಸಚಿವ ಬಾಬುಲ್ ಸುಪ್ರಿಯೋ ಲೋಕಸಭೆಗೆ ತಿಳಿಸಿದ್ದಾರೆ.
2013 ರಲ್ಲಿ ಯುಪಿಎ ನೇತೃತ್ವದ ಸರ್ಕಾರ 246 ಮನೆಗಳಲ್ಲಿ ಅಕ್ರಮವಾಗಿ ವಾಸವಿದ್ದವರನ್ನು ತೆರವುಗೊಳಿಸಿತ್ತು. ಈ ಸಂಖ್ಯೆ 2014 ರಲ್ಲಿ ಎರಡರಷ್ಟಾಗಿದ್ದು 2015 ರಲ್ಲಿ 746 ರಷ್ಟಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇಷ್ಟಾದರೂ ಇನ್ನೂ 1,207 ಮನೆಗಳಲ್ಲಿ  ಅನಧಿಕೃತವಾಗಿ ವಾಸಿಸುತ್ತಿರುವ ಜನರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com