ಇಸ್ರೋದಿಂದ ಐಆರ್‌ಎನ್‌ಎಸ್‌ಎಸ್‌ 1ಎಫ್ ಉಪಗ್ರಹ ಯಶಸ್ವಿ ಉಡಾವಣೆ

ಇಸ್ರೋದ ಮಹತ್ವಕಾಂಕ್ಷಿಯ ಭಾರತೀಯ ಪ್ರಾದೇಶಿಕ ಪಥದರ್ಶಕ ಉಪಗ್ರಹ ವ್ಯವಸ್ಥೆ (ಐಆರ್ಎನ್‌ಎಸ್ಎಸ್‌) ಸರಣಿಯ ಆರನೇ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ...
ಐಆರ್‌ಎನ್‌ಎಸ್‌ಎಸ್‌ 1ಎಫ್
ಐಆರ್‌ಎನ್‌ಎಸ್‌ಎಸ್‌ 1ಎಫ್

ಚೆನ್ನೈ: ಇಸ್ರೋದ ಮಹತ್ವಕಾಂಕ್ಷಿಯ ಭಾರತೀಯ ಪ್ರಾದೇಶಿಕ ಪಥದರ್ಶಕ ಉಪಗ್ರಹ ವ್ಯವಸ್ಥೆ (ಐಆರ್ಎನ್‌ಎಸ್ಎಸ್‌) ಸರಣಿಯ ಆರನೇ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.

ಆಂಧ್ರಪ್ರದೇಶ ಶ್ರೀಹಕರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಧ್ರುವೀಯ ಉಪಗ್ರಹ ಉಡಾವಣಾ ವಾಹನ (ಪಿಎಸ್‌ಎಲ್‌ವಿ ) ಸಿ32 ಐಆರ್‌ಎನ್‌ಎಸ್‌ಎಸ್‌ 1ಎಫ್ ಉಪಗ್ರಹವನ್ನು ಸಂಜೆ 4 ಗಂಟೆಗೆ ಹೊತ್ತು ಆಗಸಕ್ಕೆ ಚಿಮ್ಮಿತು.

ಭಾರತೀಯ ಪ್ರಾದೇಶಿಕ ಪಥದರ್ಶಕ ಉಪಗ್ರಹ ವ್ಯವಸ್ಥೆ (ಐಆರ್ಎನ್‌ಎಸ್ಎಸ್‌) ಸರಣಿಯಲ್ಲಿ ಒಟ್ಟು ಏಳು ಉಪಗ್ರಹಗಳಿದ್ದು, ಈಗಾಗಲೇ ಐದು ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಲಾಗಿದೆ. ಇದು ಅಮೆರಿಕದ ಜಿಪಿಎಸ್ ರೀತಿಯ ವ್ಯವಸ್ಥೆಯಾಗಿದ್ದು, ಯೋಜನೆ ಪೂರ್ಣಗೊಂಡ ಬಳಿಕ ಭಾರತವು ಸ್ವಂತಬಲದ ಪ್ರಾದೇಶಿಕ ಪಥದರ್ಶಕ (ಜಿಪಿಎಸ್) ವ್ಯವಸ್ಥೆ ಹೊಂದಲಿದೆ.  ಪಥದರ್ಶಕ ವ್ಯವಸ್ಥೆಗೆ ನಾಲ್ಕು ಉಪಗ್ರಹಗಳು ಮಾತ್ರ ಸಾಕು. ಆದರೆ ದಕ್ಷ ಮತ್ತು ಕರಾರುವಕ್ಕಾದ ಮಾಹಿತಿ ನೀಡಲು ಏಳು ಉಪಗ್ರಹಗಳನ್ನು ಕಕ್ಷೆಗೆ ಕಳುಹಿಸಲಾಗುತ್ತಿದೆ.

1425 ಕೆ.ಜಿ. ತೂಕದ ಐಆರ್‌ಎನ್‌ಎಸ್‌ಎಸ್‌ 1ಎಫ್ ಉಪಗ್ರಹವು 14 ವರ್ಷಗಳ ಕಾಲ ಕೆಲಸ ಮಾಡಲಿದೆ. ಈ ಹಿಂದೆ ಪಥದರ್ಶಕ ಉಪಗ್ರಹಗಳ ಉಡಾವಣೆ ವೇಳೆ ಬಳಸಿದಂತೆ, ಈ ಬಾರಿಯೂ ಭಾರ ಹೊತ್ಯುವ ಸಾಮರ್ಥ್ಯದ ‘ಎಸ್‌ಎಲ್’ ಮಾದರಿಯನ್ನು ಇಸ್ರೋ ಬಳಸುತ್ತಿದೆ. ಚಂದ್ರಯಾನ–1, ಮಂಗಳಯಾನ ಹಾಗೂ ಆಸ್ಟ್ರೋಸ್ಯಾಟ್ ಉಡಾವಣೆ ವೇಳೆಯೂ ಇದನ್ನು ಬಳಸಿಕೊಳ್ಳಲಾಗಿತ್ತು. ಮಾರ್ಚ್ 2016 ರೊಳಗೆ ಸರಣಿಯ ಎಲ್ಲ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವುದು ಇಸ್ರೋ ಗುರಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com