ವಿಜಯ ಮಲ್ಯ ವಿವಾದ: ಮೋದಿ ಮಧ್ಯಪ್ರವೇಶಕ್ಕೆ ಒತ್ತಾಯ

ಮದ್ಯ ದೊರೆ ವಿಜಯ್ ಮಲ್ಯ ವಿವಾದಗಳಿಗೆ ಸಂಬಂಧಪಟ್ಟಂತೆ ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶ ಮಾಡಬೇಕೆಂದು ಒತ್ತಾಯಿಸಿ ಸಾಲದ...
ಪ್ರಧಾನಿ ನರೇಂದ್ರ ಮೋದಿ ಯವರು ಮದ್ಯಪ್ರವೇಶಿಸಬೇಕೆಂದು ಒತ್ತಾಯಿಸುತ್ತಿರುವ ಕಿಂಗ್ ಫಿಶರ್ ಏರ್ ಲೈನ್ಸ್ ನೌಕರರು (ಕೃಪೆ: ಪಿಟಿಐ)
ಪ್ರಧಾನಿ ನರೇಂದ್ರ ಮೋದಿ ಯವರು ಮದ್ಯಪ್ರವೇಶಿಸಬೇಕೆಂದು ಒತ್ತಾಯಿಸುತ್ತಿರುವ ಕಿಂಗ್ ಫಿಶರ್ ಏರ್ ಲೈನ್ಸ್ ನೌಕರರು (ಕೃಪೆ: ಪಿಟಿಐ)
ನವದೆಹಲಿ: ಮದ್ಯ ದೊರೆ ವಿಜಯ್ ಮಲ್ಯ ವಿವಾದಗಳಿಗೆ ಸಂಬಂಧಪಟ್ಟಂತೆ ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶ ಮಾಡಬೇಕೆಂದು ಒತ್ತಾಯಿಸಿ ಸಾಲದ ಕೂಪದಲ್ಲಿರುವ ಕಿಂಗ್‌ಫಿಶರ್ ಏರ್‌ಲೈನ್ಸ್‌ನ ಮಾಜಿ ಉದ್ಯೋಗಿಗಳು ಪ್ರಧಾನಿಯವರಿಗೆ ಪತ್ರ ಬರೆದಿದ್ದಾರೆ.
ಕಿಂಗ್‌ಫಿಶರ್ ಏರ್‌ಲೈನ್ಸ್ ಉದ್ಯೋಗಿಗಳ ಹಿತದೃಷ್ಟಿಯಿಂದ ಪ್ರಧಾನಿ ಈ ವಿಷಯಕ್ಕೆ ಮದ್ಯಪ್ರವೇಶಿಸಬೇಕೆಂದು ಇವರು ಒತ್ತಾಯಿಸಿದ್ದಾರೆ. ಇಲ್ಲಿಯವರೆಗೆ ನಮಗೆ ಸಂಬಳ ಸಿಕ್ಕಿಲ್ಲ. ಭವಿಷ್ಯ ನಿಧಿ ಮತ್ತು ಗ್ರಾಜ್ಯುವಿಟಿ ಹಣ ಇನ್ನೂ ಕೈಸೇರಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. 
ನಮ್ಮಲ್ಲಿರುವ ಪ್ರಸ್ತುತ ನಿಯಮದ ಪ್ರಕಾರ ಅದು ಉದ್ಯೋಗಿಗಳ ಹಿತವನ್ನು ಕಾಪಾಡಬೇಕಿತ್ತು. ಆದರೆ ನಮಗೆ ಕೆಲಸ ಮಾಡಿದ್ದಕ್ಕೆ ಸಂಬಳ ಸಿಕ್ಕಿಲ್ಲ. ಅಷ್ಟೇ ಅಲ್ಲ ಇದರ ವಿರುದ್ಧ ನ್ಯಾಯಾಂಗ ಹೋರಾಟ ಮಾಡಲು ಹೋದರೂ, ಶುಲ್ಕ ಪಾವತಿ ಮಾಡುವಷ್ಟೂ ದುಡ್ಡು ಈ ನೌಕರರ ಕೈಯಲ್ಲಿ ಇಲ್ಲ. ಇನ್ನೂ ಕೆಲವರು ತಮಗೆ ಸಿಗಬೇಕಾಗಿದ್ದ ಹಣಕ್ಕಾಗಿ ಹೋರಾಟ ನಡೆಸುತ್ತಲೇ ಇದ್ದಾರೆ ಎಂದು ಪತ್ರದಲ್ಲಿ ಹೇಳಲಾಗಿದೆ.
ಕಿಂಗ್ ಫಿಶರ್ ಏರ್‌ಲೈನ್ಸ್ ಸ್ಥಗಿತದಿಂದಾಗಿ ಸರಿಸುಮಾರು 7,000 ನೌಕರರಿಗೆ ಸಮಸ್ಯೆಯಾಗಿದೆ. ಹೀಗೆ ಕೆಲಸ ಕಳೆದುಕೊಂಡ ನೌಕರರಲ್ಲಿ ಹೆಚ್ಚಿನವರಿಗೆ ಕಾನೂನು ಹೋರಾಟ ಮಾಡಲು ಸಾಮರ್ಥ್ಯವಿಲ್ಲದವರಿಗಾಗಿದ್ದಾರೆ. ಆದ್ದರಿಂದ ನಮಗೆ ಬಾಕಿ ಬರಬೇಕಾಗಿರುವ ಸಂಬಳದ ವಿಷಯದಲ್ಲಿ ಮದ್ಯಪ್ರವೇಶಿಸಬೇಕೆಂದು ಕಿಂಗ್‌ಫಿಶರ್ ನೌಕರರ ಪರವಾಗಿ ನಾವು ವಿನಂತಿಸುತ್ತೇವೆ ಎಂದು ಮಾಜಿ ನೌಕರರು ಪ್ರಧಾನಿಯವರಲ್ಲಿ ವಿನಂತಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com