ಆರ್ ಟಿಐ ಅಡಿಯಲ್ಲಿ ಸಚಿವರು ಉತ್ತರಿಸಬೇಕು: ಸಿಐಸಿ ಫರ್ಮಾನು

ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಕೇಂದ್ರ ಹಾಗೂ ರಾಜ್ಯಗಳ ಸಂಪುಟದ ಸಚಿವರು ಜನರ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಕೇಂದ್ರೀಯ ಮಾಹಿತಿ ...
ಕೇಂದ್ರೀಯ ಮಾಹಿತಿ ಆಯೋಗ
ಕೇಂದ್ರೀಯ ಮಾಹಿತಿ ಆಯೋಗ

ನವದೆಹಲಿ: ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಕೇಂದ್ರ ಹಾಗೂ ರಾಜ್ಯಗಳ ಸಂಪುಟದ ಸಚಿವರು ಜನರ ಪ್ರಶ್ನೆಗಳಿಗೆ  ಉತ್ತರಿಸಬೇಕು ಎಂದು ಕೇಂದ್ರೀಯ ಮಾಹಿತಿ ಆಯೋಗ(ಸಿಐಸಿ) ಅಧಿಸೂಚನೆ ಹೊರಡಿಸಿದೆ.

ಸಿಐಸಿಯ ಈ ನಿರ್ದೇಶನದಿಂದಾಗಿ ಇನ್ಮುಂದೆ ಜನರು ಆರ್‌ಟಿಐ ಕಾಯ್ದೆ ಬಳಸಿಕೊಂಡು ಯಾವುದೇ ಸಚಿವರಿಗೆ ನೇರವಾಗಿ ಪ್ರಶ್ನೆಗಳನ್ನು ಕೇಳುಹಿಸಬಹುದು. ಆ ಪ್ರಶ್ನೆಗಳಿಗೆ ಸಚಿವರ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿ ಉತ್ತರಿಸಬೇಕಾಗುತ್ತದೆ.

ಈ ಸಂಬಂಧ ಕೆಲ ಅಧಿಕಾರಿಗಳನ್ನು ಗೊತ್ತುಪಡಿಸಲು ಇಲ್ಲವೇ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಹಾಗೂ ಪ್ರಥಮ ಅಪೀಲು ಅಧಿಕಾರಿಗಳನ್ನು ನೇಮಿಸಿಕೊಳ್ಳವುದು ಸೇರಿದಂತೆ ಪ್ರತಿ ಸಚಿವರಿಗೆ ಕೇಂದ್ರ ಹಾಗೂ ರಾಜ್ಯಗಳು ಅಗತ್ಯ ಬೆಂಬಲ ನೀಡಬೇಕು ಎಂದು ಆಯೋಗವು ಬಲವಾಗಿ ಶಿಫಾರಸು ಮಾಡುತ್ತದೆ ಎಂದು ಮಾಹಿತಿ ಆಯುಕ್ತ ಶ್ರೀಧರ್ ಆಚಾರ್ಯಲು ಅವರು ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.

ಸಚಿವ ಏಕವ್ಯಕ್ತಿ ಕಚೇರಿಯಾಗಿದ್ದು, ಆರ್‌ಟಿಐ ಕಾಯ್ದೆ ಅಡಿಯ ಅರ್ಜಿಗಳಿಗೆ ಸ್ಪಂದಿಸಲು ಅಗತ್ಯ ಮೂಲಸೌಕರ್ಯಗಳಿಲ್ಲ. ಆದ್ದರಿಂದ ಸಾರ್ವಜನಿಕ ಅಧಿಕಾರಿ ಎನ್ನಲಾಗದು ಎಂದು ಹೇಳುವ ಮೂಲಕ ಸಚಿವರು ರಕ್ಷಣೆ ಪಡೆಯಲು ಸಾಧ್ಯವಿಲ್ಲ ಎಂದು ವಿಸ್ತೃತ ಆದೇಶದಲ್ಲಿ ಸಿಐಸಿ ಸ್ಪಷ್ಟಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com