ಫಾರೂಕ್ ಅಬ್ದುಲ್ಲಾ
ದೇಶ
ದೇಶ ವಿರೋಧಿ ಘೋಷಣೆಯಿಂದ ದೇಶ ವಿಭಜನೆಯಾಗಲ್ಲ: ಫಾರೂಕ್ ಅಬ್ದುಲ್ಲಾ
ಇತ್ತೀಚೆಗೆ ಭಾರತದಲ್ಲಿ ದೇಶ ವಿರೋಧಿ ಘೋಷಣೆಗಳು ಹೆಚ್ಚಾಗುತ್ತಿದ್ದು, ದೇಶ ವಿರೋಧಿ ಘೋಷಣೆಗಳಿಂದ ದೇಶದ ವಿಭಜನೆ ಮಾಡಲು ಸಾಧ್ಯವಿಲ್ಲ ಎಂದು ಜಮ್ಮು...
ನವದೆಹಲಿ: ಇತ್ತೀಚೆಗೆ ಭಾರತದಲ್ಲಿ ದೇಶ ವಿರೋಧಿ ಘೋಷಣೆಗಳು ಹೆಚ್ಚಾಗುತ್ತಿದ್ದು, ದೇಶ ವಿರೋಧಿ ಘೋಷಣೆಗಳಿಂದ ದೇಶದ ವಿಭಜನೆ ಮಾಡಲು ಸಾಧ್ಯವಿಲ್ಲ ಎಂದು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ನ್ಯಾಷನಲ್ ಕಾನ್ಫೆರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಕಾಶ್ಮೀರದಲ್ಲಿ ದೇಶ ವಿರೋಧಿ ಘೋಷಣೆಗಳನ್ನು ಕೂಗುವುದು ಸಹಜ. ಅಂಥ ಘೋಷಣೆಗಳಿಂದ ದೇಶದ ವಿಭಜನೆಯಾಗುವುದಿಲ್ಲ ಎಂದು ಹೇಳಿದ್ದಾರೆ.
ಈ ವೇಳೆ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು. ಚುನಾವಣೆ ಪ್ರಚಾರದ ವೇಳೆ ಯುವಜನತೆಗೆ ಉದ್ಯೋಗ ನೀಡುವುದಾಗಿ ಬಿಜೆಪಿ ಭರವಸೆ ನೀಡಿತ್ತು. ಆದರೆ, ಅಧಿಕಾರ ಬಂದು ಎರಡು ವರ್ಷ ಕಳೆದರು ಯುವಕರಿಗೆ ಉದ್ಯೋಗ ನೀಡಲಾಗಿಲ್ಲ. ಇನ್ನು ಕಪ್ಪು ಹಣವನ್ನೂ ಸರ್ಕಾರ ವಾಪಸ್ ತರಲು ವಿಫಲವಾಗಿದೆ ಎಂದು ಫಾರೂಕ್ ಅಬ್ದುಲ್ಲಾ ಟೀಕಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ