
ನವದೆಹಲಿ: ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ನಿರ್ದೇಶಗಳನ್ನು ಪಾಲಿಸದ 442 ಕೈಗಾರಿಕೆಗಳನ್ನು ಮುಚ್ಚುವಂತೆ ಆದೇಶ ಹೊರಡಿಸಲಾಗಿದೆ.
ತ್ಯಾಜ್ಯ ನಿರ್ವಹಣೆಗಾಗಿ ಆನ್ ಲೈನ್ ನಿರ್ವಹಣಾ ಉಪಕರಣಗಳಿಗೆ ಸಂಬಂಧಿಸಿದ ನಿರ್ದೇಶನಗಳನ್ನು ಅಥವಾ ನಿಗದಿತ ಗುಣಮಟ್ಟವನ್ನು ಅನುಸರಿಸದೆ ಇರುವ 442 ಕೈಗಾರಿಕೆಗಳನ್ನು ಮುಚ್ಚಲು ಆದೇಶ ಹೊರಡಿಸಲಾಗಿದೆ ಎಂದು ಪರಿಸರ ಇಲಾಖೆ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ.
ಗಂಗಾ ನದಿ ಜಲಾನಯನ ರಾಜ್ಯಗಳಲ್ಲಿ ಪರಿಸರ ಮಾಲಿನ್ಯ ಉಂಟುಮಾಡುತ್ತಿರುವ 764 ಕೈಗಾರಿಕೆಗಳನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ(ಸಿಪಿಸಿಬಿ)ಗುರುತಿಸಿದೆ. ದೇಶಾದ್ಯಂತ ನಿರ್ದೇಶಗಳನ್ನು ಪಾಲಿಸದ ಒಟ್ಟು 442 ಕೈಗಾರಿಎಕ್ಗಳಿಗೆ ಮಂಡಳಿ ಆದೇಶ ರವಾನೆ ಮಾಡಿರುವುದಾಗಿ ಪ್ರಕಾಶ್ ಜಾವ್ಡೇಕರ್ ರಾಜ್ಯಸಭೆಗೆ ತಿಳಿಸಿದ್ದಾರೆ.
ಗದ ಕೈಗಾರಿಕೆಗಳು, ಸಕ್ಕರೆ ಕಾರ್ಖಾನೆ, ಉಷ್ಣ ವಿದ್ಯುತ್ ಕೈಗಾರಿಕೆ, ರಾಸಾಯನಿಕ ವಸ್ತುಗಳನ್ನು ತಯಾರಿಸುವ ಕಾರ್ಖಾನೆ, ಕಸಾಯಿಖಾನೆಗಳಿಂದ ಹೆಚ್ಚು ಮಾಲಿನ್ಯ ಉಂಟಾಗುತ್ತಿದೆ ಎಂದು ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ.
Advertisement