ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ
ದೇಶ
ಮೇಲ್ಜಾತಿಯ ಹುಡುಗಿಯನ್ನು ವಿವಾಹವಾದುದಕ್ಕೆ ದಲಿತ ವಿದ್ಯಾರ್ಥಿ ಹತ್ಯೆ
ಮೇಲ್ಜಾತಿಯ ಹುಡುಗಿಯನ್ನು ವಿವಾಹವಾದುದಕ್ಕೆ 23ರ ಹರೆಯದ ದಲಿತ ವಿದ್ಯಾರ್ಥಿಯೊಬ್ಬನನ್ನು ಹತ್ಯೆಗೈದ ಘಟನೆ ವರದಿಯಾಗಿದೆ...
ನವದೆಹಲಿ: ಮೇಲ್ಜಾತಿಯ ಹುಡುಗಿಯನ್ನು ವಿವಾಹವಾದುದಕ್ಕೆ 23ರ ಹರೆಯದ ದಲಿತ ವಿದ್ಯಾರ್ಥಿಯೊಬ್ಬನನ್ನು ಹತ್ಯೆಗೈದ ಘಟನೆ ವರದಿಯಾಗಿದೆ.
ತಮಿಳ್ನಾಡಿನ ತಿರುಪುರ್‌ನಲ್ಲಿ ಭಾನುವಾರ ಮಧ್ಯಾಹ್ನ ವೇಳೆ ಮೂವರು ಆಗಂತುಕರು ವಿ. ಶಂಕರ್ ಎಂಬಾತನನ್ನು ಜನನಿಬಿಡ ಮಾರುಕಟ್ಟೆಯಲ್ಲಿ ಹತ್ಯೆ ಮಾಡಿದ್ದಾರೆ.
ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಶಂಕರ್ 8 ತಿಂಗಳ ಹಿಂದೆ ಕೌಸಲ್ಯ (19) ಯುವತಿಯನ್ನು ಮದುವೆಯಾಗಿದ್ದು ಈ ಬಗ್ಗೆ ಯುವತಿಯ ಹೆತ್ತವರು ವಿರೋಧ ವ್ಯಕ್ತ ಪಡಿಸಿದ್ದರು.
ಬೈಕ್‌ನಲ್ಲಿ ಬಂದ ಆಗಂತುಕರು ಜನರ ಎದುರಲ್ಲೇ ಶಂಕರ್ ಅವರನ್ನು ಹತ್ಯೆಗೈದು ಪರಾರಿಯಾಗಿದ್ದಾರೆ. ಶಂಕರ್ ಜತೆಗಿದ್ದ ಕೌಸಲ್ಯ ಮೇಲೆಯೂ ಅವರು ಹಲ್ಲೆಗೈದಿದ್ದು, ಈಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ