ಜಾರ್ಖಾಂಡ್‌ನಲ್ಲಿ ಅಲ್‌ಖೈದಾ ತರಬೇತಿ ಶಿಬಿರ: ದೆಹಲಿ ಪೊಲೀಸರಿಂದ ಬಹಿರಂಗ

ಭಾರತದ ಮೇಲೆ ದಾಳಿಗೆ ಮುಂದಾಗಿರುವ ಅಲ್‌ಖೈದಾ ಉಗ್ರ ಸಂಘಟನೆ ಜಾರ್ಖಾಂಡ್ ನ ಯಾವುದೋ ಭಾಗದಲ್ಲಿ ಉಗ್ರ ತರಬೇತಿ ಶಿಬಿರವನ್ನು ನಡೆಸುತ್ತಿದ್ದಾರೆಂಬ...
ಅಲ್ ಖೈದಾ
ಅಲ್ ಖೈದಾ
Updated on

ನವದೆಹಲಿ: ಭಾರತದ ಮೇಲೆ ದಾಳಿಗೆ ಮುಂದಾಗಿರುವ ಅಲ್‌ಖೈದಾ ಉಗ್ರ ಸಂಘಟನೆ ಜಾರ್ಖಾಂಡ್ ನ ಯಾವುದೋ ಭಾಗದಲ್ಲಿ ಉಗ್ರ ತರಬೇತಿ ಶಿಬಿರವನ್ನು ನಡೆಸುತ್ತಿದ್ದಾರೆಂಬ ಆಘಾತಕಾರಿ ಸುದ್ದಿಯನ್ನು ದೆಹಲಿ ಪೊಲೀಸರು ಬಹಿರಂಗಪಡಿಸಿದ್ದಾರೆ.

ಉಗ್ರ ಮಹಮ್ಮದ್ ಆಸೀಫ್ ಬಗ್ಗೆ ಚಾರ್ಜ್‌ಶೀಟ್ ಸಲ್ಲಿಕೆಗೆ ಸಮಯಾವಕಾಶ ನೀಡುವಂತೆ ಕೋರಿ ದೆಹಲಿ ನ್ಯಾಯಾಲಯಕ್ಕೆ ಕಳೆದ ವಾರ ಸಲ್ಲಿಸಿದ್ದ ಅರ್ಜಿಯಲ್ಲಿ ದೆಹಲಿ ಪೊಲೀಸ್ ಇಲಾಖೆ ಈ ಸ್ಫೋಟಕ ಮಾಹಿತಿಯನ್ನು ನೀಡಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ.

ಜಾರ್ಖಾಂಡ್ ಮೂಲದ ಅಲ್‌ಖೈದಾ ಉಗ್ರ ಅಬು ಸುಫಿಯಾನ್‌ಗಾಗಿ ನಾವು ಹುಡುಕಾಟ ನಡೆಸುತ್ತಿದ್ದೇವೆ, ಈತ ಪಾಕ್‌ಗೆ ತೆರಳಿ ಅಲ್‌ಖೈದಾ ಮತ್ತು ಲಷ್ಕರ್ ಸಂಘಟನೆ ನಡೆಸುತ್ತಿರುವ ಉಗ್ರ ತರಬೇತಿ ಪಡೆದಿದ್ದಾನೆ ಎನ್ನಲಾಗಿದೆ. ಪೊಲೀಸರ ಈ ಮಾಹಿತಿ ಜಾರ್ಖಾಂಡ್‌ನಲ್ಲಿ ಭದ್ರತೆಯನ್ನು ಬಿಗಿಗೊಳ್ಳುವಂತೆ ಮಾಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com