ಭಾರತ್ ಮಾತಾ ಕೀ ಜೈ ಎಂಬ ಘೋಷಣೆ ಕೂಗುವುದು ವ್ಯಕ್ತಿಗತ ಆಯ್ಕೆ: ಸಲ್ಮಾನ್ ಖುರ್ಷಿದ್

ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗುವುದು ಪ್ರಜೆಗಳ ಆಯ್ಕೆ, ಅವರಿಗೆ ಇಷ್ಟವಿದ್ದರೇ ಹೇಳುತ್ತಾರೆ, ಇಲ್ಲದಿದ್ದರೇ ಯಾರು ಅವರನ್ನು ಒತ್ತಾಯ ಮಾಡಬಾರದು...
ಸಲ್ಮಾನ್ ಖುರ್ಷಿದ್
ಸಲ್ಮಾನ್ ಖುರ್ಷಿದ್

ನವದೆಹಲಿ: ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗುವುದು ಪ್ರಜೆಗಳ ಆಯ್ಕೆ, ಅವರಿಗೆ ಇಷ್ಟವಿದ್ದರೇ ಹೇಳುತ್ತಾರೆ, ಇಲ್ಲದಿದ್ದರೇ ಯಾರು ಅವರನ್ನು ಒತ್ತಾಯ ಮಾಡಬಾರದು ಎಂದು ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.

ಎಐಎಂಐಎಂ ಮುಖಂಡ ಅಸಾದಾದ್ದೀನ್ ಒವೈಸಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಲ್ಮಾನ್ ಖುರ್ಷಿದ್ ಭಾರತ್ ಮಾತಾ ಕೀ ಜೈ  ಎಂಬ ಘೋಷಣೆಯನ್ನು ಸಾರ್ವಜನಿಕವಾಗಿ ಕೂಗುವುದು  ಅವರ ಸ್ವಂತ ಆಯ್ಕೆಗೆ ಬಿಡಬೇಕು. ಯಾರ ಮೇಲೂ ಒತ್ತಡ ಹೇರಬಾರದು ಎಂದು ಹೇಳಿದ್ದಾರೆ.

ನಾವು ನಮಗೆ ಹೆಮ್ಮೆ ಎನಿಸಿದಾಗ ರಾಷ್ಟ್ರಗೀತೆ ಹಾಡುತ್ತೇವೆ, ನಮ್ಮ ರಾಷ್ಟ್ರ ಧ್ವಜ ನೋಡಿದಾಗ ವಂದೇ ಮಾತರಂ ಎಂದು ಸೆಲ್ಯೂಟ್ ಹೋಡಿತೇವೆ, ಆದರೆ ಕೆಲ ಜನಗಳಿಗೆ ಇದನ್ನು ಮಾಡುವುದು ಇಷ್ಟವಿರುವುದಿಲ್ಲ, ಆಗ ಅದನ್ನು ಅವರ ಆಯ್ಕೆಗೆ ಬಿಟ್ಟು ಬಿಡಬೇಕು ಎಂದು ಹೇಳಿದ್ದಾರೆ.

ಇಂದಿನ ಯುವ ಜನಾಂಗಕ್ಕೆ ಭಾರತ್ ಮಾತಾ ಕಿ ಜೈ ಎಂದು ಹೇಳಿಸಬೇಕು ಎಂದು ಆರ್ ಎಸ್ ಎಸ್ ಮುಖಂಡ ಮೋಹನ್ ಭಾಗವತ್ ಮಾರ್ಚ್ 3 ರಂದು ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಅಸಾದುದ್ದೀನ್ ಒವೈಸಿ, ತಮ್ಮ ಕುತ್ತಿಗೆ ಮೇಲೆ ಚಾಕು ಇಟ್ಟರು ನಾನು ಭಾರತ್ ಮಾತಾ ಕೀ ಜೈ ಎಂಬ ಘೋಷಣೆ ಕೂಗುವುದಿಲ್ಲ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com