ಲಘು ಯುದ್ಧವಿಮಾನ ತೇಜಸ್ ಉತ್ಪಾದನೆಯನ್ನು ದ್ವಿಗುಣಗೊಳಿಸಲಾಗುವುದು: ಕೇಂದ್ರ ಸರ್ಕಾರ

ದೇಶಿ ನಿರ್ಮಿತ ತೇಜಸ್- ಲಘು ಯುದ್ಧವಿಮಾನದ ಉತ್ಪಾದನೆಯನ್ನು ದ್ವಿಗುಣಗೊಳಿಸುವಲಾಗುವುದು ಎಂದು ರಕ್ಷಣಾ ಇಲಾಖೆ ರಾಜ್ಯ ಸಚಿವ ಇಂದರ್ ಜಿತ್ ಸಿಂಗ್ ಹೇಳಿದ್ದಾರೆ
ತೇಜಸ್ (ಸಂಗ್ರಹ ಚಿತ್ರ)
ತೇಜಸ್ (ಸಂಗ್ರಹ ಚಿತ್ರ)

ನವದೆಹಲಿ: ದೇಶಿ ನಿರ್ಮಿತ ತೇಜಸ್- ಲಘು ಯುದ್ಧವಿಮಾನದ ಉತ್ಪಾದನೆಯನ್ನು ದ್ವಿಗುಣಗೊಳಿಸುವ ಪ್ರಸ್ತಾವನೆ ಪರಿಶೀಲನೆ ಪ್ರಕ್ರಿಯೆಯಲ್ಲಿದ್ದು, ಇದಕ್ಕಾಗಿ 1 ,259 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ರಾಜ್ಯಸಭೆಗೆ ಲಿಖಿತ ಉತ್ತರ ನೀಡಿರುವ ರಕ್ಷಣಾ ಇಲಾಖೆ ರಾಜ್ಯ ಸಚಿವ ಇಂದರ್ ಜಿತ್ ಸಿಂಗ್, ಹೆಚ್ ಎ ಎಲ್  ಲಘು ಯುದ್ಧ ವಿಮಾನಗಳ ಉತ್ಪಾದನೆಯನ್ನು ದ್ವಿಗುಣಗೊಳಿಸುವ ಸಂಪುಟ ಸಮಿತಿ ಪ್ರಸ್ತಾವನೆ ಪರಿಶೀಲನೆ ಪ್ರಸ್ತಾವನೆಯಲ್ಲಿದೆ. ಉತ್ಪಾದನೆಗೆ ತಗುಲುವ ಶೇ. 50 ರಷ್ಟು ವೆಚ್ಚವನ್ನು ಹೆಚ್ ಎ ಎಲ್ ಸಂಸ್ಥೆ, ಶೇ.25 ರಷ್ಟು ವೆಚ್ಚವನ್ನು ಐಎಎಫ್ ಹಾಗೂ ಶೇ.20 ರಷ್ಟು ಭಾರತೀಯ ನೌಕಾ ಪಡೆ ಭರಿಸಲಿದೆ ಎಂದು ಹೇಳಿದ್ದಾರೆ.   
ಉತ್ಪಾದನೆಗೆ 36 ತಿಂಗಳ ಕಾಲಮಿತಿ ನಿಗದಿಪಡಿಸಲಾಗಿದ್ದು 80 ಲಘು ವಿಮಾನಗಳಲ್ಲಿ ನಾಲ್ಕು ಅವಶ್ಯಕ ಸಾಮರ್ಥ್ಯಗಳನ್ನು ಅಳವಡಿಸಲು ಸೂಚನೆ ನೀಡಲಾಗಿದೆ ಎಂದು ಸಂಸತ್ ಗೆ ಇಂದರ್ ಜಿತ್ ಸಿಂಗ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com