ಹಿಂದೂ ಮೂಲಭೂತವಾದ ಇಸ್ಲಾಮಿಕ್ ಭಯೋತ್ಪಾದನೆಗಿಂತ ಭಯಾನಕ: ರಾಮಚಂದ್ರ ಗುಹ

ಇತಿಹಾಸಕಾರ-ಲೇಖಕ ರಾಮಚಂದ್ರ ಗುಹಾ, ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಹಿಂದೂ ರಾಷ್ಟ್ರೀಯವಾದದ ವಿರುದ್ಧ ಎಚ್ಚರಿಕೆಯಿಂದರಬೇಕು ಎಂದು ಕರೆ ನೀಡಿದ್ದಾರೆ
ಇತಿಹಾಸಕಾರ-ಲೇಖಕ ರಾಮಚಂದ್ರ ಗುಹಾ
ಇತಿಹಾಸಕಾರ-ಲೇಖಕ ರಾಮಚಂದ್ರ ಗುಹಾ

ನವದೆಹಲಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್ ಅವರನ್ನು ದೇಶದ ಅತಿ ಅಪಾಯಕಾರಿ ರಾಜಕಾರಣಿಗಳೆಂದು ಹೇಳಿರುವ ಇತಿಹಾಸಕಾರ-ಲೇಖಕ ರಾಮಚಂದ್ರ ಗುಹ, ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಹಿಂದೂ ರಾಷ್ಟ್ರೀಯವಾದದ ವಿರುದ್ಧ ಎಚ್ಚರಿಕೆಯಿಂದರಬೇಕು ಎಂದು ಕರೆ ನೀಡಿದ್ದಾರೆ.

ಸ್ಪ್ರಿಂಗ್ ಫೀವರ್ ಸಾಹಿತ್ಯ ಉತ್ಸವದಲ್ಲಿ ಮಾತನಾಡಿದ ರಾಮಚಂದ್ರ ಗುಹಾ, ದೇಶ ವಿಭಜನೆ ಹಾಗೂ ರಾಮಜನ್ಮಭೂಮಿ ಚಳುವಳಿ ನಂತರ ದೇಶದಲ್ಲಿ  ಹಿಂದೂ ರಾಷ್ಟ್ರೀಯತೆ ಹೆಚ್ಚಾಗಿದೆ. ಹಿಂದೂ ರಾಷ್ಟ್ರೀಯತೆ ದೇಶಕ್ಕೆ ಹೊಸದೇನು ಅಲ್ಲ. ದೇಶ ವಿಭಜನೆಯಾದ ಬೆನ್ನಲ್ಲೇ ಅದು ಹುಟ್ಟಿಕೊಂಡಿತ್ತು.  ದೇಶ ವಿಭಜನೆ  ಹಾಗೂ ರಾಮಜನ್ಮಭೂಮಿ ಚಳುವಳಿ ನಂತರ ಉಂಟಾದ ಹಿಂದೂ ರಾಷ್ಟ್ರೀಯತೆಗೆ ಆರ್ ಎಸ್ಎಸ್ ಕಾರಣ ಎಂದು ಅವರು ಹೇಳಿದ್ದಾರೆ.

ಭಾರತದಲ್ಲಿ ಹಿಂದೂಗಳು ಶೇ.85 ರಷ್ಟು ಇರುವುದರಿಂದ ಹಿಂದೂ ಮೂಲಭೂತವಾದ ಇಸ್ಲಾಮಿಕ್ ಭಯೋತ್ಪಾದನೆಗಿಂತ ಭಯಾನಕವಾದದ್ದು, ಬಹುಸಂಖ್ಯಾತ ಹಿಂದೂಗಳ ಚಿಂತನೆಯ ಬಗ್ಗೆ ಭಯಭೀತನಾಗಿದ್ದೇನೆ.  ಬಲಪಂಥೀಯ ಬುದ್ಧಿಜೀವಿಗಳನ್ನು ಹುಟ್ಟುಹಾಕುವುದರಲ್ಲಿ ವಿಫಲವಾಗಿರುವ ಬಿಜೆಪಿ ಬುದ್ದಿಜೀವಿ ವಿರೋಧಿ ಪಕ್ಷ, ಆರ್ ಎಸ್ಎಸ್ ನ ಗೋಳವಳ್ಕರ್ ಪರಮತವೈರಿ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com