ನವದೆಹಲಿ: ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ರಂಗಕರ್ಮಿ ಬಿ.ಜಯಶ್ರೀ, ಬಾಲಿವುಡ್ ಗೀತ ರಚನೆಕಾರ ಜಾವೇದ್ ಅಖ್ತರ್ ಸೇರಿದಂತೆ 17 ರಾಜ್ಯಸಭಾ ಸದಸ್ಯರ ಅವಧಿ ಮುಕ್ತಾಯವಾದ ಹಿನ್ನಲೆಯಲ್ಲಿ ರಾಜ್ಯಸಭೆಯಲ್ಲಿ ಮಂಗಳವಾರ ಅವರಿಗೆ ಬೀಳ್ಕೊಡುಗೆ ನೀಡಲಾಯಿತು.
ಈ ವೇಳೆ ಹಾಜರಿದ್ದ ರಾಜ್ಯಸಭೆ ಸಭಾಪತಿ ಹಮೀದ್ ಅನ್ಸಾರಿ, ಉಪಸಭಾಪತಿ, ಪಿಜೆ ಕುರಿಯನ್, ಸಭಾನಾಯಕ ಅರುಣ್ ಜೇಟ್ಲಿ ಹಾಗೂ ಪ್ರತಿಪಕ್ಷ ನಾಯಕ ಗುಲಾಮ್ ನಬಿ ಅಜಾದ್ ಶುಭ ಕೋರಿದ್ದಾರೆ.
ನಂತರ ಮಾತನಾಡಿದ ಬಾಲಿವುಡ್ ಗೀತ ರಚನೆಕಾರ ಜಾವೇದ್ ಅಖ್ತರ್, ದೇಶದ ಭವಿಷ್ಯದ ದಷ್ಟಿಯಿಂದ ಆಡಳಿತ ಹಾಗೂ ವಿರೋಧ ಪಕ್ಷಗಳು ಒಗ್ಗೂಡಿ ಕೆಲಸ ಮಾಡಬೇಕಿದೆ. ಸಂಸತ್ ಕಲಾಪಗಳಿಗೆ ಅಡ್ಡಿಮಾಡುವುದರಿಂದ ದೇಶದ ಪ್ರಗತಿಯಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಬಾಲಚಂದ್ರ ಮುಂಗೇಕರ್ (ಸಂಕೇತ), ಅಶ್ವನಿ ಕುಮಾರ್ (ಕಾಂಗ್ರೆಸ್), ಎಂ ಎಸ್ ಗಿಲ್ (ಕಾಂಗ್ರೆಸ್), ಮಣಿ ಶಂಕರ್ ಅಯ್ಯರ್ (ಕಾಂಗ್ರೆಸ್), ಅವಿನಾಶ್ ರಾಯ್ ಖನ್ನಾ (ಬಿಜೆಪಿ), ಜಾವೇದ್ ಅಖ್ತರ್, ಜಯಶ್ರೀ, ಕೆ ಬಾಲಗೋಪಾಲನ್ (ಸಿಪಿಎಂ) ಮತ್ತು ಟಿ ಎನ್ ಸೀಮಾ (ಸಿಪಿಎಂ) ನಿವೃತ್ತಿ ಹೊಂದುತ್ತಿರುವ ಸದಸ್ಯರು.