ರಾಷ್ಟ್ರವನ್ನು ಒಡೆಯುವ ದೇಶದ್ರೋಹ ಕಾನೂನನ್ನು ರದ್ದುಗೊಳಿಸಿ: ಶರದ್ ಯಾದವ್ ಒತ್ತಾಯ

ದೇಶದ್ರೋಹ ಕಾಯ್ದೆ, ರಾಷ್ಟ್ರವನ್ನು ಇಬ್ಭಾಗ ಮಾಡುವ ಸಾಧ್ಯತೆ ಇರುವುದರಿಂದ ಅದನ್ನು ರದ್ದುಗೊಳಿಸಬೇಕೆಂದು ಜೆಡಿಯು ನಾಯಕ ಶರದ್ ಯಾದವ್ ಒತ್ತಾಯಿಸಿದ್ದಾರೆ.
ಶರದ್ ಯಾದವ್
ಶರದ್ ಯಾದವ್

ನವದೆಹಲಿ: ದೇಶದ್ರೋಹ ಕಾಯ್ದೆ, ರಾಷ್ಟ್ರವನ್ನು ಇಬ್ಭಾಗ ಮಾಡುವ ಸಾಧ್ಯತೆ ಇರುವುದರಿಂದ ಅದನ್ನು ರದ್ದುಗೊಳಿಸಬೇಕೆಂದು ಜೆಡಿಯು ನಾಯಕ ಶರದ್ ಯಾದವ್ ಒತ್ತಾಯಿಸಿದ್ದಾರೆ.

ರಾಷ್ಟ್ರದ್ರೋಹದ ಕಾಯ್ದೆ ವಸಾಹತು ಯುಗದ ಕಾಯ್ದೆಯಾಗಿದ್ದು ಅದನ್ನು ಭಾರತದಲ್ಲಿ ರದ್ದುಗೊಳಿಸಬೇಕಾದ ಅಗತ್ಯವಿದೆ. ದೇಶದ್ರೋಹ ಪ್ರಕರಣವನ್ನು ವಿದ್ಯಾರ್ಥಿಗಳ ಮೇಲೆ ಬಳಸುವುದರಿಂದ ದೇಶ ಇಬ್ಭಾಗವಾಗುತ್ತದೆ ಎಂದು ಶರದ್ ಯಾದವ್ ಟ್ವೀಟ್ ಮಾಡಿ ಎಚ್ಚರಿಸಿದ್ದಾರೆ.

ದೇಶವಿರೋಧಿ ಘೋಷಣೆ ಕೂಗಿದ ಜೆಎನ್ ಯು ವಿವಿ ವಿದ್ಯಾರ್ಥಿಗಳ ಮೇಲೆ ದೇಶ ದ್ರೋಹ ಪ್ರಕರಣ ದಾಖಲಿಸಿದಾಗಿನಿಂದ ದೇಶದ್ರೋಹ ಕಾನೂನಿನ ಬಗ್ಗೆ ಚರ್ಚೆ ನಡೆಯುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com