
ಮುಂಬೈ: ಅಸಾದುದ್ದೀನ್ ಒವೈಸಿಯ ಭಾರತೀಯ ಪೌರತ್ವ ರದ್ದುಗೊಳಿಸಬೇಕು ಎಂದು ಆಗ್ರಹಿಸಿದ್ದ ಶಿವಸೇನೆ, ಕಾನೂನಾತ್ಮಕವಾಗಿ ಅಸಾವುದ್ದೀನ್ ಒವೈಸಿಯ ಶಿರಚ್ಛೇಧ ಮಾಡಿ ಎಂದು ಹೇಳಿದೆ.
ಭಾರತ್ ಮಾತಾ ಕಿ ಜೈ ಎಂದು ಹೇಳಲು ನಿರಾಕರಿಸಿದ್ದ ಅಸಾವುದ್ದೀನ್ ಒವೈಸಿ ಅವರ ಶಿರಚ್ಛೇಧ ಏಕೆ ಮಾಡಬಾರದು ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಪ್ರಶ್ನಿಸಿದೆ. ಒವೈಸಿ ಹೇಳಿಕೆ ನಡುವೆಯೂ ಆತನ ವಿರುದ್ಧ ಕ್ರಮ ಕೈಗೊಳ್ಳದೇ ಇರುವುದಕ್ಕೆ ಸಾಮ್ನಾದ ಸಂಪಾದಕೀಯದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನೂ ಟೀಕಿಸಿರುವ ಶಿವಸೇನೆ, ಒಂದೆಡೆ ಸಿಂಧುದುರ್ಗ್ ನಲ್ಲಿ ಪ್ರತಿಭಟನಾ ನಿರತ ಶಾಸಕರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸುತ್ತಾರೆ. ಇನ್ನೊಂದೆಡೆ ರಾಷ್ಟ್ರದ್ರೋಹಕರ ಹೇಳಿಕೆ ನೀಡಿದ ಒವೈಸಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಭಾರತ್ ಮಾತಾ ಕಿ ಜೈ ಎಂದು ಹೇಳುವುದಿಲ್ಲ ಎಂದ ಒವೈಸಿ ಅಂಥವರೇ ಸ್ಪೂರ್ತಿಯಾಗಿರುವುದರಿಂದ ಈ ದೇಶದ ಮುಸ್ಲಿಮರ ಸ್ಥಿತಿ ಇನ್ನೂ ಶೋಚನೀಯವಾಗಿದೆ ಎಂದು ಶಿಅವಸೇನೆ ಆರೋಪಿಸಿದೆ.
Advertisement