
ಚಂಡೀಗಢ: ಭಾರತೀಯ ರಾಷ್ಟ್ರೀಯ ಲೋಕದಳದ (ಐಎನ್ ಎಲ್ ಡಿ) ಹರ್ಯಾಣದ 10 ಶಾಸಕರು ಪಂಜಾಬ್ ವಿಧಾನಸಭೆಗೆ ನುಗ್ಗಿದ ಘಟನೆ ಮಾ.17 ರಂದು ನಡೆದಿದೆ.
ಸಟ್ಲಜ್ ಯಮುನಾ ಸಂಪರ್ಕ ಕಾಲುವೆಯ ಭೂಮಿಯನ್ನು ಡಿ- ನೊಟಿಫೈ ಮಾಡಿರುವ ಪಂಜಾಬ್ ಸರ್ಕಾರದ ಆದೇಶವನ್ನು ವಾಪಸ್ ಪಡೆಯಬೇಕೆಂದು ಐಎನ್ ಎಲ್ ಡಿ ಶಾಸಕರು ಆಗ್ರಹಿಸಿದ್ದಾರೆ. ಡಿ-ನೊಟಿಫಿಕೇಶನ್ ಆದೇಶದ ಮೂಲಕ ಪಂಜಾಬ್ ಸರ್ಕಾರ ಹರ್ಯಾಣ ಜನತೆಯ ಬೆನ್ನಿಗೆ ಚೂರಿ ಹಾಕಿದೆ. ಇತಿಹಾಸದಲ್ಲಿ ಯಾರೂ ಇಂತಹ ಅಸಾಂವಿಧಾನಿಕ ನಿರ್ಧಾರ ಕೈಗೊಂಡಿಲ್ಲ ಎಂದು ಐಎಲ್ ಡಿ ಶಾಸಕರು ಹೇಳಿದ್ದಾರೆ.
ಪಂಜಾಬ್ ಸರ್ಕಾರದ ನಿರ್ಧಾರದಿಂದ ಉಭಯ ರಾಜ್ಯಗಳ ಸಾಮಾಜಿಕ ಸಂಬಂಧ ಹದಗೆಡಲಿದೆ ಎಂದು ಹರ್ಯಾಣದ ಐಎಲ್ ಡಿ ಶಾಸಕರು ಎಚ್ಚರಿಕೆ ನೀಡಿದ್ದಾರೆ. ಸಟ್ಲಜ್ ಯಮುನಾ ಸಂಪರ್ಕ ಕಾಲುವೆಯಲ್ಲಿದ್ದ ಸುಮಾರು 3,928 ಎಕರೆ ಭೂಮಿಯನ್ನು ಡಿನೊಟಿಫೈ ಮಾಡಿದ್ದ ಪಂಜಾಬ್ ಸರ್ಕಾರ ನೊಟಿಫೈ ಮಾಡಿದ್ದ ಭೂಮಿಯನ್ನು ವಾಪಸ್ ಪಡೆಯುವಂತೆ ಪಂಜಾಬ್ ನ ರೈತರಿಗೆ ಸೂಚಿಸಿತ್ತು.
Advertisement