![ಸಾಂದರ್ಭಿಕ ಚಿತ್ರ](http://media.assettype.com/kannadaprabha%2Fimport%2F2016%2F3%2F18%2Foriginal%2Farmy-new.jpg?w=480&auto=format%2Ccompress&fit=max)
ಸಿಕಂದರಾಬಾದ್: ಸೇನೆಗೆ ನೇಮಕ ಮಾಡಿಕೊಳ್ಳುವ ವೇಳೆ ಉಂಟಾದ ನೂಕು ನುಗ್ಗಲಿನಿಂದ ಕನಿಷ್ಠ ಐದು ಮಂದಿ ಗಾಯಗೊಂಡಿರುವ ಘಟನೆ ಹೈದರಾಬಾದ್ ನಲ್ಲಿರುವ ತಿರುಮಲಗಿರಿ ಸೇನಾ ನೇಮಕಾತಿ ಶಿಬಿರದಲ್ಲಿ ಇಂದು ಬೆಳಗ್ಗೆ ನಡೆದಿದೆ.
ಅರೆಕಾಲಿಕ ಸೈನಿಕರ ನೇಮಕಾತಿ ರ್ಯಾಲಿಯಲ್ಲಿ ಸುಮಾರು 10.ಸಾವಿರ ಆಕಾಂಕ್ಷಿಗಳು ಭಾಗವಹಿಸಿದ್ದರು.
ಅಭ್ಯರ್ಥಿಗಳ ದೈಹಿಕ ಪರೀಕ್ಷೆ ನಡೆಸಲು ಗೇಟ್ ಗಳನ್ನು ತೆರೆದಾಗ ಒಮ್ಮೆಲೆ ಎಲ್ಲಾ ಅಭ್ಯರ್ಥಿಗಳು ನುಗ್ಗಿದ್ದಾರೆ. ಇದರಿಂದ ಕಾಲ್ತುಳಿತ ಉಂಟಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement