ಅಲ್ಲಾನ 99 ಹೆಸರು ಹಿಂಸೆಗೆ ಬೆಂಬಲ ನೀಡುವುದಿಲ್ಲ: ನರೇಂದ್ರ ಮೋದಿ

ಇಸ್ಲಾಂ ಧರ್ಮ ಶಾಂತಿಯಲ್ಲಿ ನಂಬಿಕೆಯಿಟ್ಟಿದ್ದು, ಸೂಫಿಗಳು ಇಸ್ಲಾಂ ಧರ್ಮದ ಅತಿ ದೊಡ್ಡ ಕೊಡುಗೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯ ಪಟ್ಟಿದ್ದಾರೆ...
ನರೇಂದ್ರ ಮೋದಿ
ನರೇಂದ್ರ ಮೋದಿ

ನವದೆಹಲಿ: ಇಸ್ಲಾಂ ಧರ್ಮ ಶಾಂತಿಯಲ್ಲಿ ನಂಬಿಕೆಯಿಟ್ಟಿದ್ದು, ಸೂಫಿಗಳು ಇಸ್ಲಾಂ ಧರ್ಮದ ಅತಿ ದೊಡ್ಡ ಕೊಡುಗೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯ ಪಟ್ಟಿದ್ದಾರೆ.

ಇಸ್ಲಾಂ ವಿಶ್ವದ ಮಹಾನ್‌ ಧರ್ಮ ಎಂದು ಬಣ್ಣಿಸಿರುವ ಪ್ರಧಾನಿ ಮೋದಿ, ಅಲ್ಲಾಹ್‌‌‌‌ನನ್ನು ಪ್ರಾರ್ಥಿಸುವ ಮೂಲಕ ಹಿಂಸೆಯನ್ನು ತ್ಯಜಿಸುವಂತೆ ವಿಶ್ವಕ್ಕೆ ಕರೆ ನೀಡಬೇಕು ಎಂದು ಹೇಳಿದ್ದಾರೆ.

ದೆಹಲಿಯಲ್ಲಿ ನಡೆಯುತ್ತಿರುವ ನಾಲ್ಕು ದಿನಗಳ ವಿಶ್ವ ಸೂಪಿ ವೇದಿಕೆ ಉದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ, ಧಾರ್ಮಿಕ ಮುಖಂಡರು ಇಸ್ಲಾಂನ ಸಂದೇಶವನ್ನು ಸಾರಬೇಕು ಎಂದು ಸಲಹೆ ನೀಡಿದರು.

ಕೆಲ ದೇಶಗಳಲ್ಲಿ ಭಯೋತ್ಪಾದಕರ ಗುಂಪುಗಳೇ ನೀತಿ ನಿರೂಪಣೆಯಲ್ಲಿ ಮಹತ್ವದ ಶಕ್ತಿಗಳಾಗಿವೆ ಎಂದು ಮೋದಿ ಬೇಸರ ವ್ಯಕ್ತಪಡಿಸಿದರು. ಭಯೋತ್ಪಾದನೆ ಹಾಗೂ ಉಗ್ರವಾದ ಇದೀಗ ವಿಶ್ವ ನಾಶದ ಶಕ್ತಿಯಾಗಿ ಬೆಳೆಯುತ್ತಿದ್ದು, ಧರ್ಮ ಮತ್ತು ಭಯೋತ್ಪಾದನೆಯ ಜೊತೆಯಾಗದಂತೆ ನೋಡಿಕೊಳ್ಳಬೇಕು ಎಂದು ಮಾರ್ಮಿಕವಾಗಿ ತಿಳಿಸಿದರು.

ಧರ್ಮದ ಹೆಸರಿನಲ್ಲಿ ಭಯೋತ್ಪಾದನೆಯನ್ನು ಹರಡುವವರು ಧರ್ಮ ವಿರೋಧಿಗಳು ಎಂದು ಗುಡುಗಿದರು. ಭಯೋತ್ಪಾದನೆ ಯಾವುದೇ ಧರ್ಮಕ್ಕೆ ಸೀಮಿತವಾಗಿಲ್ಲ. ಇದರ ವಿರುದ್ಧ ಹೋರಾಡಲು ಮೌಲ್ಯಗಳ ಬಲ ಮತ್ತು ಧರ್ಮಗಳ ನೈಜ ಸಂದೇಶಗಳ ಬಳಕೆ ಮಾಡಬೇಕು ಎಂದು ಪ್ರಧಾನಿ ಮೋದಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com