
ನವದೆಹಲಿ: ದೇಶವಿರೋಧಿ ಘೋಷಣೆ ಕೂಗಿದ ಆರೋಪ ಎದುರಿಸುತ್ತಿರುವ ಉಮರ್ ಖಾಲಿದ್ ಹಾಗೂ ಅನಿರ್ಬಾನ್ ಭಟ್ಟಾಚಾರ್ಯಗೆ ದೆಹಲಿಯ ನ್ಯಾಯಾಲಯ ಆರು ತಿಂಗಳ ಮದ್ಯಂತರ ಜಾಮೀನು ಮಂಜೂರು ಮಾಡಿದೆ.
ಇಬ್ಬರೂ ತಲಾ 25 ,000 ಜಾಮೀನು ಬಾಂಡ್ ನೀಡಿದ ನಂತರ ಜೈಲಿನಿಂದ ಬಿಡುಗಡೆ ಮಾಡಲಾಗುತ್ತದೆ. ಷರತ್ತು ಬದ್ಧ ಜಾಮೀನು ಮಂಜೂರು ಮಾಡಿರುವ ದೆಹಲಿ ನ್ಯಾಯಾಲಯ, ಕೋರ್ಟ್ ಅನುಮತಿ ಇಲ್ಲದೇ ದೆಹಲಿ ಬಿಟ್ಟು ಹೋಗಬಾರದು ಎಂದು ಖಾಲಿದ್ ಹಾಗೂ ಭಟ್ಟಾಚಾರ್ಯ ಗೆ ಸೂಚನೆ ನೀಡಿದೆ.
ಜೆಎನ್ ಯು ವಿವಿಯಲ್ಲಿ ದೇಶವಿರೋಧಿ ಘೋಷಣೆ ಕೇಳಿಬಂದಿದ್ದ ಪ್ರಕರಣದಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್, ಉಮರ್ ಖಾಲಿದ್, ಅನಿರ್ಬಾನ್ ಭಟ್ಟಾಚಾರ್ಯ ಅವರನ್ನು ಬಂಧಿಸಲಾಗಿತ್ತು.
Advertisement