
ಭೋಪಾಲ್ : ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ವಿಕೃತವಾಗಿ ರೂಪಿಸಿ ಹಾಕಿದ್ದ ಇಬ್ಬರನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದಾರೆ.
22 ವರ್ಷದ ಶಕೀರ್ ಯೂನುಸ್ ಬಂಥಿಯಾ ಮತ್ತು ಕಾಲೇಜು ವಿದ್ಯಾರ್ಥಿ ವಾಸೀಂ ಶೇಖ್ ಅವರನ್ನು ಬಂಧಿಸಿದ್ದಾರೆ. ಇವರಿಬ್ಬರೂ ಮಧ್ಯ ಪ್ರದೇಶದ ಖರಗೋನ್ ನಿವಾಸಿಗಳಾಗಿದ್ದಾರೆ.
ಮುಖ್ಯಸ್ಥ ಮೋಹನ್ ಭಾಗವತ್ ಅವರ ಚಿತ್ರದ ಮುಖವನ್ನು ಉಳಿಸಿಕೊಂಡು ಅದರ ಕೆಳಭಾಗಕ್ಕೆ ಮಹಿಳೆಯ ಚಿತ್ರದ ಶರೀರದ ಭಾಗವನ್ನು ಜೋಡಿಸಿ ಅಪ್‌ಲೋಡ್ ಮಾಡಲಾಗಿದೆ. ಭಾಗವತ್ ಚಿತ್ರಕ್ಕೆ ಜೋಡಿಸಲ್ಪಟ್ಟ ಮಹಿಳೆಯ ಚಿತ್ರದಲ್ಲಿ ಮಹಿಳೆಯು ಮೈಗೆ ಅಂಟಿಕೊಂಡಿರುವ ಕಂದು ಬಣ್ಣದ ಪ್ಯಾಂಟ್ ಮತ್ತು ಬಳಿ ಬಣ್ಣದ ಶರ್ಟ್ ತೊಟ್ಟಿದ್ದಾಳೆ.
ಆರೋಪಿಗಳು ತಮ್ಮ ಈ ಕೃತ್ಯದ ಮೂಲಕ ಜನರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದು ಸಾಮಾಜಿಕ ಜಾಲ ತಾಣಗಳಲ್ಲಿ ಅಶ್ಲೀಲ ವಿಚಾರಗಳನ್ನು ಹಾಕಿದ್ದಾರೆ ಎಂದು ಖರಗೋನ್ ಪೊಲೀಸ್ ಸುಪರಿಂಟೆಂಡೆಂಟ್ ಅಮಿತ್ ಕುಮಾರ್ ಸಿಂಗ್ ಹೇಳಿದ್ದಾರೆ.
ರಜನೀಶ್ ನಿಂಬಾಳ್ಕರ್ ಎಂಬ ಆರ್‌ಎಸ್‌ಎಸ್ ಕಾರ್ಯಕರ್ತರು ಈ ಬಗ್ಗೆ ದೂರು ನೀಡಿದ್ದು ಆ ಪ್ರಕಾರ ಮಾಹಿತಿ ತಂತ್ರಜ್ಞಾನ ಕಾಯಿದೆ ಸೆ.67 ಮತ್ತು ಐಪಿಸಿ ಸೆ.505(2) ಪ್ರಕಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement