ಫ್ಲಿಪ್‌ಕಾರ್ಟ್ ಸಿಇಒ ಬಿನ್ನಿ ಬನ್ಸಾಲ್ ಅವರ ಇಮೇಲ್ ಖಾತೆ ಹ್ಯಾಕ್ ಆಗಿಲ್ಲ

ಫ್ಲಿಪ್‌ಕಾರ್ಟ್ ಸಿಇಒ ಬಿನ್ನಿ ಬನ್ಸಾಲ್ ಅವರ ಇಮೇಲ್ ಖಾತೆ ಹ್ಯಾಕ್ ಆಗಿಲ್ಲ, ಬದಲು ನಕಲಿ ಖಾತೆ ಸೃಷ್ಟಿ ಮಾಡಲಾಗಿದೆ ಎಂದು ಫ್ಲಿಪ್‌ಕಾರ್ಟ್...
ಫ್ಲಿಪ್‌ಕಾರ್ಟ್
ಫ್ಲಿಪ್‌ಕಾರ್ಟ್
ನವದೆಹಲಿ: ಫ್ಲಿಪ್‌ಕಾರ್ಟ್ ಸಿಇಒ ಬಿನ್ನಿ ಬನ್ಸಾಲ್ ಅವರ ಇಮೇಲ್ ಖಾತೆ ಹ್ಯಾಕ್ ಆಗಿಲ್ಲ, ಬದಲು ನಕಲಿ ಖಾತೆ ಸೃಷ್ಟಿ ಮಾಡಲಾಗಿದೆ ಎಂದು ಫ್ಲಿಪ್‌ಕಾರ್ಟ್ ಹೇಳಿಕೆ ನೀಡಿದೆ. 
ಬಿನ್ನಿ ಬನ್ಸಾಲ್ ಅವರ ಇಮೇಲ್ ಖಾತೆಯನ್ನು ಹ್ಯಾಕ್ ಮಾಡಲಾಗಿಲ್ಲ. ಫ್ಲಿಪ್‌ಕಾರ್ಟ್‌ನ ಕಾರ್ಪರೇಟ್ ಇಮೇಲ್ ವ್ಯವಸ್ಥೆಯನ್ನು ಅಷ್ಟೊಂದು ಸುಲಭವಾಗಿ ಹ್ಯಾಕ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಹೆಸರು ಮತ್ತು ವಿಳಾಸವನ್ನು ಮಾತ್ರ ಬಳಸಿ ನಕಲಿ ಇಮೇಲ್ ಖಾತೆಯನ್ನು ಸೃಷ್ಟಿಸಲಾಗಿದೆ ಎಂದು ಪ್ರಸ್ತುತ ಸಂಸ್ಥೆ ನೀಡಿದ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಖ್ಯಾತ ಸುದ್ದಿ ಪತ್ರಿಕೆಯೊಂದು ಶುಕ್ರವಾರ ಬನ್ಸಾಲ್ ಅವರ ಇಮೇಲ್ ಖಾತೆ ಹ್ಯಾಕ್ ಆಗಿದೆ. ಈ ಇಮೇಲ್ ನಿಂದ ಫ್ಲಿಪ್‌ಕಾರ್ಟ್ ಸಿಎಫ್‌ಒ ಸಂಜಯ್ ಬವೇಜಾ ಅವರಿಗೆ ಮಾರ್ಚ್ 1ರಂದು ಬೆಳಗ್ಗೆ 11.33ಕ್ಕೆ ಮೇಲ್ ಕಳಿಸಿ 80,000 ಡಾಲರ್ ಕಳಿಸುವಂತೆ ಕೇಳಲಾಗಿತ್ತು ಎಂದು ಸುದ್ದಿ ಪ್ರಕಟಿಸಿತ್ತು.
ಆದರೆ ಬನ್ಸಾಲ್ ಅವರ ಖಾತೆಯನ್ನು ಹ್ಯಾಕ್ ಮಾಡಿಲ್ಲ, ನಕಲಿ ಖಾತೆಯನ್ನು ಸೃಷ್ಟಿಸಿ ಈ ಕೃತ್ಯವೆಸಗಲಾಗಿದೆ.
ಏತನ್ಮಧ್ಯೆ, ನಕಲಿ ಖಾತೆ ಸೃಷ್ಟಿಸಿದವರ ವಿರುದ್ಧ ದೂರು ದಾಖಲಿಸಿದ್ದು, ತನಿಖೆ ನಡೆಯುತ್ತಿದೆ ಎಂದು ಫ್ಲಿಪ್‌ಕಾರ್ಟ್ ಕಂಪನಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com