ಜೆಎನ್ ಯುನಲ್ಲಿ ಮನುಸ್ಮೃತಿ ಸುಟ್ಟ ಪ್ರಕರಣ: 5 ವಿದ್ಯಾರ್ಥಿಗಳಿಗೆ ನೋಟಿಸ್

ಜವಾಹಾರ್ ಲಾಲ್ ನೆಹರು ವಿಶ್ವ ವಿದ್ಯಾಲಯ ಆವರಣದಲ್ಲಿ ಪ್ರಾಚೀನ ಗ್ರಂಥ ಮನುಸ್ಮೃತಿಯ ಕೆಲವು ಪುಟಗಳನ್ನು ಸುಟ್ಟು ಹಾಕಿದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಜವಾಹಾರ್ ಲಾಲ್ ನೆಹರು ವಿಶ್ವ ವಿದ್ಯಾಲಯ ಆವರಣದಲ್ಲಿ ಪ್ರಾಚೀನ ಗ್ರಂಥ ಮನುಸ್ಮೃತಿಯ ಕೆಲವು ಪುಟಗಳನ್ನು ಸುಟ್ಟು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ವಿದ್ಯಾರ್ಥಿಗಳಿಗೆ ಜೆಎನ್ ಯು ಆಡಳಿತ ಮಂಡಳಿ ನೋಟಿಸ್ ಜಾರಿ ಮಾಡಿದೆ.
ಶನಿವಾರ ಐವರು ವಿದ್ಯಾರ್ಥಿಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಮಾರ್ಚ್ 8 ರಂದು ಸಂಜೆ 6.30ರ ಸುಮಾರಿಗೆ ವಿಶ್ವವಿದ್ಯಾಲಯದ ಆವರಣದಲ್ಲಿ ಮನುಸ್ಮೃತಿಯ ಕೆಲವು ಪುಟಗಳನ್ನು ಸುಟ್ಟ ಘಟನೆ ನಡೆದಿತ್ತು ಎಂದು ಭದ್ರತಾ ವಿಭಾಗದ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ವಿದ್ಯಾರ್ಥಿ ಮೇಲ್ವಿಚಾರಕ ಅಧಿಕಾರಿಯು ವಿದ್ಯಾರ್ಥಿಗಳಿಗೆ ಕಳುಹಿಸಿದ ನೋಟಿಸಿನಲ್ಲಿ ಈ ರೀತಿ ತಿಳಿಸಲಾಗಿದೆ. ಈ ಘಟನೆಯಲ್ಲಿ ನಿಮ್ಮ ಪಾತ್ರವೇನು ಎಂಬುದನ್ನು ಮಾರ್ಚ್ 21ರ ಒಳಗಾಗಿ ತಿಳಿಸಬೇಕು. ಘಟನೆಯಲ್ಲಿ ನಿಮ್ಮ ಪಾತ್ರವಿಲ್ಲವಾದಲ್ಲಿ ಸಾಬೀತುಪಡಿಸುವ ಸಾಕ್ಷ್ಯಗಳನ್ನು ಅಧಿಕಾರಿಗೆ ಒದಗಿಸಬೇಕು ಎಂದು ನೋಟಿಸ್ ಹೇಳಿದೆ. 
ಮನುಸ್ಮೃತಿಯ ಈ ಭಾಗಗಳು ಮಹಿಳೆಯರನ್ನು ಅವಮಾನಿಸುತ್ತವೆ ಎಂದು ಆರೋಪಿಸಿ ಎಬಿವಿಪಿಯ ಐವರು ಬಂಡಾಯ ಸದಸ್ಯರು ಎಐಎಸ್ ಎ ಮತ್ತು ಎನ್ ಎಸ್ ಯುಐ ಸಂಘಟನೆಯ ಸದಸ್ಯರ ಜತೆ ಸೇರಿಕೊಂಡು ಮನುಸ್ಮೃತಿಯ ಕೆಲವು ಪುಟಗಳನ್ನು ಸುಟ್ಟು ಹಾಕಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com