ನಿಜಾಮಾಬಾದ್: ತೆಲಂಗಾಣದ ನಿಜಾಮಾಬಾದ್‌ನಲ್ಲಿರುವ ಗೋಪನ್‌ಪಳ್ಳಿ ಗ್ರಾಮದಲ್ಲಿ ಕ್ರೈಸ್ತರ ಪ್ರಾರ್ಥನಾ ಕೋಣೆಯೊಂದಕ್ಕೆ ದುರ್ಷರ್ಮಿಗಳು ಬೆಂಕಿ ಹಚ್ಚಿದ ಘಟನೆ ವರದಿಯಾಗಿದೆ..ಆ ಗ್ರಾಮದಲ್ಲಿ ಕ್ರೈಸ್ತರ ಪ್ರಾರ್ಥನಾ ಕೋಣೆಯನ್ನು ನಿರ್ಮಿಸುವುದಕ್ಕೆ ಸ್ಥಳೀಯರು ವಿರೋಧ ಸೂಚಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ..ಶುಕ್ರವಾರ ರಾತ್ರಿ ಆಗಂತುಕರು ಕೋಣೆಗೆ ಬೆಂಕಿ ಹಚ್ಚಿದ್ದು, ಪ್ರಕರಣದ ಬಗ್ಗೆ ತನಿಖೆ ಮುಂದುವರಿದಿದೆ ಎಂದಿದ್ದಾರೆ ಪೊಲೀಸರು..ಈ ಹಿಂದೆ ಹಿಂದುಗಳನ್ನು ಕ್ರೈಸ್ತ ಮತಕ್ಕೆ ಮತಾಂತರ ಮಾಡಲು ಯತ್ನಿಸಿದ್ದ ಸ್ಥಳೀಯ ಪಾದ್ರಿಗೆ ಹಿಂದೂ ಸಂಘಟನೆಯ 40 ಮಂದಿಯ ಗುಂಪು ಥಳಿಸಿತ್ತು. .ಈ ವೈಷಮ್ಯವೇ ಮುಂದುವರಿದು ಪ್ರಾರ್ಥನಾ ಕೋಣೆಗೆ ಬೆಂಕಿ ಹಚ್ಚಲು ಕಾರಣವಾಗಿರಬಹುದು ಎಂದು ಪೊಲೀಸರು ಹೇಳಿದ್ದಾರೆ..Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics