
ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಬಿಜೆಪಿ-ಪಿಡಿಪಿ ಮೈತ್ರಿ ಸರ್ಕಾರ ಮುಂದುವರೆಸುವ ವಿಷಯ ಕಗ್ಗಂಟಾಗಿಯೇ ಉಳಿದಿದ್ದು, ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಬಿಜೆಪಿ ನಾಯಕ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ.
ಸರ್ಕಾರ ರಚನೆ ಸಂಬಂಧ ಮೆಹಬೂಬಾ ಮುಫ್ತಿ ಸದ್ಯದಲ್ಲೇ ಪಿಡಿಪಿ ನಾಯಕರ ಸಭೆಯನ್ನು ಕರೆಯಲಿದ್ದಾರೆ ಇದಕ್ಕೂ ಮುನ್ನ ನವದೆಹಲಿಗೆ ತೆರಳಲಿರುವ ಅವರು ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿ ಮಾತನಾಡಲಿದ್ದಾರೆ ಎಂದು ಪಿಡಿಪಿ ಪಕ್ಷದಿಂದ ಮಾಧ್ಯಮಗಳಿಗೆ ಮಾಹಿತಿ ದೊರೆತಿದೆ. ಕಣಿವೆ ರಾಜ್ಯದಲ್ಲಿ ಎದುರಾಗಿರುವ ಸರ್ಕಾರ ರಚನೆ ಬಿಕ್ಕಟ್ಟಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಅರುಣ್ ಜೇಟ್ಲಿ, ಜಮ್ಮು-ಕಾಶ್ಮೀರದ ಆಡಳಿತ ಕಾರ್ಯಸೂಚಿಗೆ ಬಿಜೆಪಿ ಬದ್ಧವಾಗಿದೆ ಎಂದು ಹೇಳಿದ್ದರು.
ಮೈತ್ರಿ ಸರ್ಕಾರ ಮುಂದುವರೆಸುವ ಬಗ್ಗೆ ಪಿಡಿಪಿ-ಬಿಜೆಪಿ ನಾಯಕರು ಸಕಾರಾತ್ಮಕ ಹೇಳಿಕೆ ನೀಡುತ್ತಿದ್ದರೂ ಈ ವರೆಗೂ ಸರ್ಕಾರ ರಚನೆಗೆ ಸಂಬಂಧಿಸಿದ ಬೆಳವಣಿಗೆಗಳು ನಡೆದಿಲ್ಲ.
Advertisement