ಭಾರತ-ಪಾಕ್ ಪಂದ್ಯದ ವಿಷಯದಲ್ಲಿ ಎಎಂಯು ವಿದ್ಯಾರ್ಥಿಗಳ ನಡುವೆ ಘರ್ಷಣೆ: ಓರ್ವನ ಸ್ಥಿತಿ ಗಂಭೀರ

ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯದ ವಿಷಯದಲ್ಲಿ ಅಲೀಗಡ್‌ ಮುಸ್ಲಿಂ ವಿವಿಯ ವಿದ್ಯಾರ್ಥಿಗಳ ಎರಡು ಗುಂಪಿನ ನಡುವೆ ಘರ್ಷಣೆ ನಡೆದಿದೆ.
ಅಲೀಗಡ್‌ ಮುಸ್ಲಿಂ ವಿವಿ
ಅಲೀಗಡ್‌ ಮುಸ್ಲಿಂ ವಿವಿ
Updated on

ಅಲೀಗಡ್‌: ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯದ ವಿಷಯದಲ್ಲಿ ಅಲೀಗಡ್‌ ಮುಸ್ಲಿಂ ವಿವಿಯ ವಿದ್ಯಾರ್ಥಿಗಳ ಎರಡು ಗುಂಪಿನ ನಡುವೆ ಘರ್ಷಣೆ ನಡೆದಿದೆ.

ಹಿಂದುಸ್ತಾನ್ ಟೈಮ್ಸ್ ವರದಿಯ ಪ್ರಕಾರ ಭಾರತ-ಪಾಕ್ ಪಂದ್ಯ ನಡೆಯುತ್ತಿದ್ದ ವೇಳೆಯಲ್ಲೇ ವಿದ್ಯಾರ್ಥಿಗಳ ಗುಂಪಿನ ನಡುವೆ ಘರ್ಷಣೆ ನಡೆದಿದ್ದು ಗಾಯಗೊಂಡ ಓರ್ವ ವಿದ್ಯಾರ್ಥಿಯ ಸ್ಥಿತಿ ಗಂಭೀರವಾಗಿದೆ. ಭಾರತ ಪಾಕಿಸ್ತಾನದ ವಿರುದ್ಧ ಗೆಲ್ಲುತ್ತಿದ್ದಂತೆಯೇ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ವಿದ್ಯಾರ್ಥಿಗಳ ಗುಂಪೊಂದು ಗುಂಡು ಹಾರಿಸಿದ್ದಾರೆ. ವಿದ್ಯಾರ್ಥಿಗಳ ನಡುವೆ ಘರ್ಷಣೆ ಉಂಟಾಗಿ ಖಲೀಂ ಅಹ್ಮದ್ ಎಂಬ ಎಂ ಟೆಕ್ ವಿದ್ಯಾರ್ಥಿಗೆ ಗುಂಡೇಟು  ತಗುಲಿದೆ.
   
ಚಿಕಿತ್ಸೆ ಪಡೆಯುತ್ತಿರುವ ಗಾಯಗೊಂಡ ವಿದ್ಯಾರ್ಥಿ ಖಲೀಂ ಸ್ಥಿತಿ ಗಂಭೀರವಾಗಿದೆ.  ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸರು ವಿಶ್ವವಿದ್ಯಾನಿಲಯದಲ್ಲಿ ಘರ್ಷಣೆ ನಡೆದಿದ್ದನ್ನು ಸ್ಪಷ್ಟಪಡಿಸಿದ್ದಾರೆ. ಆದರೆ ಈ ವರೆಗೂ ಲಿಖಿತ ದೂರು ಬಂದಿಲ್ಲ ಎಂದು ಹೇಳಿದ್ದಾರೆ.

ಘರ್ಷಣೆ ಹಿಂದಿರುವ ಕಾರಣ ತಿಳಿದುಬಂದಿಲ್ಲ, ಈ ಕುರಿತು ಲಿಖಿತ ದೂರು ದಾಖಲಾದಾಗ ಮಾತ್ರ ಘಟನೆ ಹಿಂದಿರುವ ಕಾರಣ ತಿಳಿಯಲಿದೆ ಎಂದು ಪೊಲೀಸ್ ಅಧಿಕಾರಿ ಅನ್ಶುಲ್ ಗುಪ್ತ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com