ಮರಾಠ್ ವಾಡ ಪ್ರತ್ಯೇಕ ರಾಜ್ಯ ವಿವಾದ: ಮಹಾರಾಷ್ಟ್ರ ಎಜಿ ರಾಜೀನಾಮೆ

ಮರಾಠ್ ವಾಡ ಪ್ರತ್ಯೇಕ ರಾಜ್ಯ ರಚನೆ ಕುರಿತು ಹೇಳಿಕೆ ನೀಡಿ ವಿವಾದ ಉಂಟು ಮಾಡಿದ್ದ ಮಹಾರಾಷ್ಟ್ರ ಅಡ್ವೊಕೇಟ್ ಜನರಲ್(ಎಜಿ) ಶ್ರೀಹರಿ ಅಣೆ ರಾಜೀನಾಮೆ ನೀಡಿದ್ದಾರೆ.
ಮಹಾರಾಷ್ಟ್ರ ಅಡ್ವೊಕೇಟ್ ಜನರಲ್ ಶ್ರೀಹರಿ ಅಣೆ
ಮಹಾರಾಷ್ಟ್ರ ಅಡ್ವೊಕೇಟ್ ಜನರಲ್ ಶ್ರೀಹರಿ ಅಣೆ
Updated on
ಮುಂಬೈ: ಮರಾಠ್ ವಾಡ ಪ್ರತ್ಯೇಕ ರಾಜ್ಯ ರಚನೆ ಕುರಿತು ಹೇಳಿಕೆ ನೀಡಿ ವಿವಾದ ಉಂಟು ಮಾಡಿದ್ದ ಮಹಾರಾಷ್ಟ್ರ ಅಡ್ವೊಕೇಟ್ ಜನರಲ್(ಎಜಿ) ಶ್ರೀಹರಿ ಅಣೆ ರಾಜೀನಾಮೆ ನೀಡಿದ್ದಾರೆ. 
ಮಹಾರಾಷ್ಟ್ರ ರಾಜ್ಯಪಾಲರನ್ನು ಭೇಟಿ ಮಾಡಿದ ಶ್ರೀಹರಿ ಅಣೆ, ರಾಜೀನಾಮೆ ಪತ್ರವನ್ನು ನೀಡಿದ್ದಾರೆ. 2015 ರ ಅಕ್ಟೋಬರ್ ನಲ್ಲಿ ಸುನಿಲ್ ಮನೋಹರ್ ರಾಜೀನಾಮೆ ನೀಡಿದ್ದ ನಂತರ ಶ್ರೀಹರಿ ಅಣೆ ಅಡ್ವೊಕೇಟ್ ಜನರಲ್ ಆಗಿ ನೇಮಕಗೊಂಡಿದ್ದರು. ಶ್ರೀಹರಿ ಅಣೆ, ಈ ಹಿಂದೆಯೂ ವಿದರ್ಭ ಪ್ರತ್ಯೇಕ ರಾಜ್ಯ ಕುರಿತು ಜನಾಭಿಪ್ರಾಯ ಸಂಗ್ರಹಣೆಯಾಗಬೇಕೆಂದು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಲ್ಲಿದ್ದರು. 
ಅಡ್ವೊಕೇಟ್ ಜನರಲ್ ಪ್ರತ್ಯೇಕ ರಾಜ್ಯ ರಚನೆ ಕುರಿತು ಹೇಳಿಕೆ ನೀದಿದ್ದಕ್ಕೆ ಮಹಾರಾಷ್ಟ್ರದ ವಿಧಾನಸಭೆಯಲ್ಲೂ ಖಂಡನೆ ವ್ಯಕ್ತವಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com