ರಾಷ್ಟ್ರಗೀತೆ ಬಗ್ಗೆ ವಿವಾದ ಅನಗತ್ಯ: ಬಿಗ್ ಬಿಗೆ ಬೆಂಬಲ ಸೂಚಿಸಿದ ಎಸ್‌ಪಿಬಿ

ರಾಷ್ಟ್ರಗೀತೆಯನ್ನು ಇಂತಿಷ್ಟೇ ನಿಮಿಷದಲ್ಲಿ ಹಾಡಿ ಮುಗಿಸಬೇಕೆಂದು ಯಾವ ನಿಯಮದಲ್ಲಿ ಕೇಳಲಾಗಿದೆ? ಹಾಗೆ ಹೇಳಿದ್ದರೆ ನಿಜವಾಗಿಯೂ ಅಚ್ಚರಿ! ಆದಾಗ್ಯೂ...
ಎಸ್ಪಿ ಬಾಲಸುಬ್ರಮಣ್ಯಂ -ಅಮಿತಾಬ್ ಬಚ್ಚನ್
ಎಸ್ಪಿ ಬಾಲಸುಬ್ರಮಣ್ಯಂ -ಅಮಿತಾಬ್ ಬಚ್ಚನ್
ನವದೆಹಲಿ: ರಾಷ್ಟ್ರಗೀತೆಯನ್ನು ಇಂತಿಷ್ಟೇ ನಿಮಿಷದಲ್ಲಿ ಹಾಡಿ ಮುಗಿಸಬೇಕೆಂದು ಯಾವ ನಿಯಮದಲ್ಲಿ ಹೇಳಲಾಗಿದೆ? ಹಾಗೆ ಹೇಳಿದ್ದರೆ ನಿಜವಾಗಿಯೂ ಅಚ್ಚರಿ! ಆದಾಗ್ಯೂ, ಅಮಿತಾಬ್ ಬಚ್ಚನ್ ಅವರು ರಾಷ್ಟ್ರಗೀತೆಯನ್ನು ಹಾಡಿದಾಗ ಮಾತ್ರ ಈ ಆರೋಪ ಕೇಳಿ ಬಂದಿದ್ದು ಯಾಕೆ ಎಂಬುದು ತಿಳಿಯುತ್ತಿಲ್ಲ ಎಂದು ಖ್ಯಾತ ಗಾಯಕ ಎಸ್ಪಿ ಬಾಲಸುಬ್ರಮಣ್ಯಂ ತಮ್ಮ ಫೇಸ್ ಬುಕ್ ನಲ್ಲಿ ಬರೆದಿದ್ದಾರೆ.
ಲತಾಜಿ, ಭೀಮ್‌ಸೇನ್ ಜೋಷಿ, ಬಾಲಮುರಳಿ ಮೊದಲಾದವರೊಂದಿಗೆ ನಾನೂ ರಾಷ್ಟ್ರಗೀತೆ ಹಾಡಿದ್ದೆ. ಆಗ ಇಂಥಾ ಆರೋಪಗಳೇನೂ ಕೇಳಿ ಬಂದಿಲ್ಲವಲ್ಲಾ...
ಶನಿವಾರ ಈಡೆನ್ ಗಾರ್ಡನ್ಸ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯದ ಮುನ್ನ ಅಮಿತಾಬ್ ಬಚ್ಚನ್ ತಪ್ಪಾಗಿ ರಾಷ್ಟ್ರಗೀತೆ ಹಾಡಿದ್ದಾರೆ ಎಂದು ಒಬ್ಬ ವ್ಯಕ್ತಿ ಬಚ್ಚನ್ ವಿರುದ್ಧ ದೂರು ನೀಡಿದ್ದು, ಈ ಹಿನ್ನಲೆಯಲ್ಲಿ ಎಸ್‌ಪಿಬಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ. 
ಆ ದಿನ ಬಚ್ಚನ್ ಸ್ಪಷ್ಟವಾಗಿಯೇ ರಾಷ್ಟ್ರಗೀತೆ ಆಲಾಪಿಸಿದ್ದರು ಎಂದು ಎಸ್‌ಪಿಬಿ ಹೇಳಿದ್ದಾರೆ. ಜನರ ಗಮನ ಸೆಳೆಯುವುದಕ್ಕಾಗಿಯೇ ಈ ರೀತಿಯ ವಿವಾದಗಳನ್ನು ಸೃಷ್ಟಿಸಲಾಗುತ್ತದೆ. ನಮ್ಮ ದೇಶದಲ್ಲಿ ನ್ಯಾಯಾಧೀಶರಿಗೆ ಮಾಡಲು ಸಾಕಷ್ಟು ಕೆಲಸಗಳಿವೆ. ಅವರಿಗೆ ಒತ್ತಡ ಹೇರುವಂತೆ ಇನ್ನೊಂದು ಕೆಲಸವನ್ನೂ ನೀಡಬೇಕೆ? ನಮ್ಮ ದೇಶದಲ್ಲಿ ಇದಲ್ಲದೆ ಅದೆಷ್ಟೋ ಸಮಸ್ಯೆಗಳಿವೆ. ಸಾಧ್ಯವಾದರೆ ವಿವಾದಗಳನ್ನು ಸೃಷ್ಟಿಸುವವರು ಅಂಥಾ ಸಮಸ್ಯೆಗಳನ್ನು  ಪರಿಹರಿಸಲು ಯತ್ನಿಸಬೇಕು. ಜನರ ಗಮನ ಸೆಳೆಯುವುದಕ್ಕೋಸ್ಕರ ಅನಗತ್ಯ ವಿವಾದಗಳನ್ನು ಸೃಷ್ಟಿಸಬಾರದು. 
ನಾನು ಬಚ್ಚನ್ ಅವರೊಂದಿಗಿದ್ದೇನೆ. ಅವರು ರಾಷ್ಟ್ರಗೀತೆ ಹಾಡುವಾಗ ನನಗೆ ಅಭಿಮಾನವುಂಟಾಗುತ್ತದೆ ಎಂದು ಎಸ್‌ಪಿಬಿ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com