ತೇಜಸ್ ಲಘು ಯುದ್ಧ ವಿಮಾನ
ದೇಶ
ಫೈರ್ ಪವರ್ ಪ್ರದರ್ಶನದ ವೇಳೆ ಗುರಿ ತಲುಪಲು 'ತೇಜಸ್' ಯುದ್ಧ ವಿಮಾನ ವಿಫಲ
ದೇಶೀಯವಾಗಿ ನಿರ್ಮಿಸಲಾಗಿರುವ ಲಘು ಯುದ್ಧ ವಿಮಾನ ತೇಜಸ್ ಫೈರ್ ಪವರ್ ಪ್ರದರ್ಶನದ ವೇಳೆ ಗುರಿ ತಲುಪಲು ವಿಫಲವಾಗಿದೆ.
ನವದೆಹಲಿ: ದೇಶೀಯವಾಗಿ ನಿರ್ಮಿಸಲಾಗಿರುವ ಲಘು ಯುದ್ಧ ವಿಮಾನ ತೇಜಸ್ ಫೈರ್ ಪವರ್ ಪ್ರದರ್ಶನದ ವೇಳೆ ಗುರಿ ತಲುಪಲು ವಿಫಲವಾಗಿದೆ.
ಫೈರ್ ಪವರ್ ಪ್ರದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭಾಗವಹಿಸಿದ್ದರು. ಕಳೆದ ವಾರ ಪಠಾಣ್ ಕೋಟ್ ವಾಯು ನೆಲೆಯಲ್ಲಿ ನಡೆದ ಐರನ್ ಫಿಸ್ಟ್ ತಾಲೀಮು ವೇಳೆ ನಿಗದಿತ ಗುರಿಗೆ ಲೇಸರ್ ನಿರ್ದೇಶಿತ ವಿಧಾನದಲ್ಲಿ ಬಾಂಬ್ ಹಾಕುವುದಕ್ಕೆ ತೇಜಸ್ ಯುದ್ಧ ವಿಮಾನ ವಿಫಲವಾಗಿದೆ ಎಂದು ಭಾರತೀಯ ವಾಯುಪಡೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆದರೆ ಇದು ತಾಲೀಮಿನ ವೇಳೆ ನಡೆದಿರುವುದರಿಂದ ತೇಜಸ್ ಲಘು ಯುದ್ಧ ವಿಮಾನ ಗುರಿ ತಲುಪಲು ವಿಫಲವಾಗಿರುವುದನ್ನು ವೈಫಲ್ಯ ಎಂದು ಹೇಳಲು ಸಾಧ್ಯವಿಲ್ಲ ಭಾರತೀಯ ವಾಯುಪಡೆ ಹೇಳಿದೆ. ತೇಜಸ್ ಲಘು ವಿಮಾನವನ್ನು ಹೆಚ್ಚಿನ ಸಂಖ್ಯೆಯಲ್ಲಿ ವಾಯುಪಡೆಗೆ ಸೇರ್ಪಡೆಗೊಳಿಸಬೇಕೆಂದು ರಕ್ಷಣಾ ಸಚಿವಾಲಯ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ತೇಜಸ್ ಲಘು ವಿಮಾನದ ತಾಲೀಮು ಪ್ರಾಮುಖ್ಯತೆ ಪಡೆದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ