
ಮುಂಬೈ: ಪತ್ನಿ ಇಂದ್ರಾಣಿಯಿಂದಲ್ಲೇ ಮಗಳು ಶೀನಾ ಬೋರಾ ಹತ್ಯೆಯಾಗಿದೆ ಎಂದು ಸ್ಟಾರ್ ಇಂಡಿಯಾ ಸಮೂಹದ ಮಾಜಿ ಮುಖ್ಯಸ್ಥ ಪೀಟರ್ ಮುಖರ್ಜಿಯ ಮಾಹಿತಿ ಹೊರಹಾಕಿದ್ದಾರೆ.
2012ರಲ್ಲಿ ನಡೆದ ಶೀನಾ ಬೋರಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೆರೆವಾಸ ಅನುಭವಿಸುತ್ತಿರುವ ಸ್ಟಾರ್ ಟಿವಿ ವಾಹಿನಿಯ ಮಾಜಿ ಕಾರ್ಯನಿರ್ವಾಹಕ ಪೀಟರ್ ಮುಖರ್ಜಿ, ತಾವೂ ಸಲ್ಲಿಸಿರುವ ಜಾಮೀನು ಅರ್ಜಿಯಲ್ಲಿ ಈ ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ.
ಪತ್ನಿ ಇಂದ್ರಾಣಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮಳಾಗಿದ್ದು, ಅವಳಿಗೆ ಎಲ್ಲದರಲ್ಲೂ ಆಸೆ ಹೆಚ್ಚಾಗಿತ್ತು ಎಂದು ಜಾಮೀನು ಅರ್ಜಿಯಲ್ಲಿ ಮಾಹಿತಿ ನೀಡಿದ್ದಾರೆ, 2012 ರಲ್ಲಿ ಇಂದ್ರಾಣಿ ಮುಖರ್ಜಿ ತನ್ನ ಮಗಳು ಶೀನಾ ಬೋರಾಳನ್ನು ರಾಯ್ ಪುರ ಕಾಡಿನಲ್ಲಿ ಕೊಲೆ ಮಾಡಿ ಬೆಂಕಿ ಹಚ್ಚಿ ಪ್ರಕರಣವನ್ನು ಮುಚ್ಚಿಟ್ಟಿದ್ದಳು.
ಪೀಟರ್ ಮುಖರ್ಜಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸಿಬಿಐ ವಿಶೇಷ ಕೋರ್ಟ್ ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಮತ್ತೊಂದು ಜಾಮೀನು ಅರ್ಜಿ ಸಲ್ಲಿಸಿದ್ದಾರೆ.
Advertisement