ದೇಶವಿರೋಧಿ ಘೋಷಣೆ ಕುಗುತ್ತಿದ್ದವರಿಂದ ಜೈ ಹಿಂದ್ ಘೋಷಣೆ, ಬಿಜೆಪಿಯ ಸೈದ್ಧಾಂತಿಕ ಗೆಲುವು: ಜೇಟ್ಲಿ

ರಾಷ್ಟ್ರೀಯತೆ ವಿಷಯದಲ್ಲಿ ಸೈದ್ಧಾಂತಿಕ ಸವಾಲಿನಲ್ಲಿ ಮೊದಲ ಹಂತದ ಜಯ ಗಳಿಸಿರುವ ಬಿಜೆಪಿ ದೇಶ ವಿರೋಧಿ ಘೋಷಣೆ ಕೂಗುತ್ತಿದ್ದವು ಜೈ ಹಿಂದ್ ಎಂಬ ಘೋಷಣೆ ಕೂಗುವಂತೆ ಮಾಡಿದೆ
ಅರುಣ್ ಜೇಟ್ಲಿ
ಅರುಣ್ ಜೇಟ್ಲಿ

ನವದೆಹಲಿ: ರಾಷ್ಟ್ರೀಯತೆ ವಿಷಯದಲ್ಲಿ ಸೈದ್ಧಾಂತಿಕ ಸವಾಲಿನಲ್ಲಿ ಮೊದಲ ಹಂತದ ಜಯ ಗಳಿಸಿರುವ ಬಿಜೆಪಿ, ದೇಶ ವಿರೋಧಿ ಘೋಷಣೆ ಕೂಗುತ್ತಿದ್ದವು ಜೈ ಹಿಂದ್ ಎಂಬ ಘೋಷಣೆ ಕೂಗುವಂತೆ ಮಾಡಿದೆ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಭಾರತ್ ಮಾತಾ ಕಿ ಜೈ ಎಂಬ ಘೋಷ ವಾಕ್ಯ ಹೇಳುವುದರ ಬಗ್ಗೆ ನಡೆದಿದ್ದ ಚರ್ಚೆಗೆ ಪ್ರತಿಕ್ರಿಯೆಯಾಗಿ ಅರುಣ್ ಜೇಟ್ಲಿ ಈ ಹೇಳಿಕೆ ನೀಡಿದ್ದಾರೆ.  ಭಾರತ್ ಮಾತಾ ಕಿ ಜೈ ಎಂದು ಹೇಳಲು ನಿರಾಕರಿಸಿದ್ದ ಎಂಐಎಂ ಶಾಸಕ ಅಸಾವುದ್ದೀನ್ ಒವೈಸಿ ಜೈ ಹಿಂದ್ ಘೋಷಣೆ ಕೂಗಿದ್ದರು.  ಈ ಬೆಳವಣಿಗೆಗಳ ನಂತರ ಮಾತನಾಡಿರುವ ಜೇಟ್ಲಿ, ದೇಶ ವಿರೋಧಿ ಘೋಷಣೆ ಕೂಗುತ್ತಿದ್ದವರು ಜೈ ಹಿಂದ್ ಎಂಬ ಘೋಷಣೆ ಕೂಗುವಂತೆ ಮಾಡಿರುವುದು  ಸೈದ್ಧಾಂತಿಕ ಸವಾಲಿನಲ್ಲಿ ಬಿಜೆಪಿಗೆ ದೊರೆತ ಮೊದಲ ಜಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಯುವಜನರಲ್ಲಿ ದೇಶಭಕ್ತಿ ಮೂಡಿಸಲು ಭಾರತ್ ಮಾತಾ ಕಿ ಜೈ ರೀತಿಯ ಘೋಷಣೆಗಳನ್ನು ಹೇಳಿಕೊಡಬೇಕೆಂದು ಆರ್ ಎಸ್ ಎಸ್ ಮುಖಂಡ ಮೋಹನ್ ಭಾಗವತ್ ಹೇಳಿದ್ದರು. ಇದನ್ನು ಎಂಐಎಂ ಶಾಸಕ ಅಸಾವುದ್ದೀನ್ ಒವೈಸಿ ವಿರೋಧಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com