ದೇಶ ವಿರೋಧಿ ಘೋಷಣೆ ಕೂಗುತ್ತಿದ್ದವರು ಈಗ ಜೈ ಹಿಂದ್ ಹೇಳಬೇಕಾದ ಸ್ಥಿತಿ ಬಂದಿದೆ: ಜೇಟ್ಲಿ

ಕಳೆದ ಕೆಲ ವಾರಗಳಿಂದ ದೇಶದಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ರಾಷ್ಟ್ರೀಯತೆಯ ಸೈದ್ಧಾಂತಿಕ ಕಾದಾಟದ ಮೊದಲ ಸುತ್ತಿನಲ್ಲಿ ಗೆದ್ದಿದ್ದು...
ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ
ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ

ನವದೆಹಲಿ: ಕಳೆದ ಕೆಲ ವಾರಗಳಿಂದ ದೇಶದಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ರಾಷ್ಟ್ರೀಯತೆಯ ಸೈದ್ಧಾಂತಿಕ ಕಾದಾಟದ ಮೊದಲ ಸುತ್ತಿನಲ್ಲಿ ಗೆದ್ದಿದ್ದು ಬಿಜೆಪಿ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

 ಈ ಹಿಂದೆ ದೇಶ ವಿಭಜನೆ ಹಾಗೂ ರಾಷ್ಟ್ರವಿರೋಧಿ ಕೂಗು ಎತ್ತಿದವರೂ ಸಹ ಈಗ ಜೈಹಿಂದ್ ಎನ್ನುತ್ತಿದ್ದಾರೆ. ನಮಗೆ ಇದೊಂದು ದೊಡ್ಡ ಸೈದ್ಧಾಂತಿಕ ಸವಾಲಾಗಿತ್ತು. ಅವರು ಭಾರತ್ ಮಾತಾಕೀ ಜೈ ಎಂದು ಕೂಗದಿದ್ದರೂ ಜೈ ಹಿಂದ್ ಎಂದಿದ್ದಾರೆ. ಈ ಹೋರಾಟದ ಮೊದಲ ಸುತ್ತಿನಲ್ಲಿ ನಮಗೆ ಜಯ ಸಿಕ್ಕಿರುವುದಕ್ಕೆ ಉತ್ತಮ ಸಾಕ್ಷಿ’ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಸಾವರ್ಕರ್ ರಿಂದ ಸ್ಪೂರ್ತಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಇತ್ತೀಚೆಗೆ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ಭಾರತ ವಿರೋಧಿ ಘೋಷಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಗ್ಗೆ ಮಾತನಾಡಿದ ಜೇಟ್ಲಿ, ಕೆಲವರು ಸಾವರ್ಕರ್ ರವರ ರಾಷ್ಟ್ರೀಯತೆ ಬಗ್ಗೆ ಪ್ರಶ್ನಿಸುತ್ತಾರೆ. ಅವರು ನಮ್ಮ ದೇಶದ ಕೋಟ್ಯಂತರ ಜನರಿಗೆ ಸ್ಪೂರ್ತಿಯಾಗಿದ್ದಾರೆ. ಕೆಲವರು ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ದೇಶವನ್ನು ಮುರಿಯಲು ಹೊರಟಿದ್ದಾರೆ. ಇದು ನಿಜಕ್ಕೂ ನಮಗೆ ಸೈದ್ಧಾಂತಿಕ ಸವಾಲಾಗಿದೆ. ಇದನ್ನು ನಾವು ಸೈದ್ಧಾಂತಿ ಹೋರಾಟ ಎಂದು ಪರಿಗಣಿಸಬೇಕು ಎಂದು ಹೇಳಿದರು.

ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ಸ್ಟಾಂಡ್ ಅಪ್ ಇಂಡಿಯಾ ಯೋಜನೆಯನ್ನು ಆರಂಭಿಸುತ್ತಿದ್ದು, ಪ್ರತಿ ಬ್ಯಾಂಕಿನ ಶಾಖೆಗಳಿಗೆ ಒಂದು ಕೋಟಿ ರೂಪಾಯಿ ಸಾಲ ನೀಡಲಾಗುವುದು. ಆ ಸಾಲವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮಹಿಳೆಯರಿಗೆ ಸ್ವ ಉದ್ಯಮವನ್ನು ಆರಂಭಿಸಲು ನೀಡಲಾಗುತ್ತದೆ ಎಂದು ತಿಳಿಸಿದರು.

ಮುಂಬರುವ ಚುನಾವಣೆಗಳಲ್ಲಿ ಮತದಾರರು ಮೋದಿಯವರ ಕಾಂಗ್ರೆಸ್ ಮುಕ್ತ ಭಾರತವನ್ನು ನಿಜ ಮಾಡಲಿದ್ದಾರೆ ಎಂದು ಜೇಟ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com