ತನಿಖೆಗೆ ಸಹಕರಿಸಲು ಸಿದ್ಧ: ರಿಂಗಿಂಗ್ ಬೆಲ್ಸ್ ಕಂಪೆನಿ

ವಿಶ್ವದಲ್ಲಿಯೇ ಅತ್ಯಂತ ಅಗ್ಗದ ಬೆಲೆಗೆ ಸ್ಮಾರ್ಟ್ ಫೋನ್ ನೀಡುತ್ತೇವೆ ಎಂದು ಭಾರೀ ಸುದ್ದಿ ಮಾಡಿದ್ದ ರಿಂಗಿಂಗ್ ಬೆಲ್ಸ್ ಕಂಪೆನಿ, ಯಾವುದೇ...
ಸಾಂದರ್ಭಿಕ ಚಿತ್ರ( ರಿಂಗಿಂಗ್ ಬೆಲ್ಸ್ ಅಧಿಕೃತ ವೆಬ್ ಸೈಟ್ ನಿಂದ)
ಸಾಂದರ್ಭಿಕ ಚಿತ್ರ( ರಿಂಗಿಂಗ್ ಬೆಲ್ಸ್ ಅಧಿಕೃತ ವೆಬ್ ಸೈಟ್ ನಿಂದ)

ನವದೆಹಲಿ: ವಿಶ್ವದಲ್ಲಿಯೇ ಅತ್ಯಂತ ಅಗ್ಗದ ಬೆಲೆಗೆ ಸ್ಮಾರ್ಟ್ ಫೋನ್ ನೀಡುತ್ತೇವೆ ಎಂದು ಭಾರೀ ಸುದ್ದಿ ಮಾಡಿದ್ದ ರಿಂಗಿಂಗ್ ಬೆಲ್ಸ್ ಕಂಪೆನಿ, ಯಾವುದೇ ರೀತಿಯ ತನಿಖೆಗೆ ಸಹಕಾರ ನೀಡುವುದಾಗಿ ಹೇಳಿದೆ.

ಯಾವುದೇ ಸರ್ಕಾರಿ ಸಂಸ್ಥೆಗಳ ತನಿಖೆಗೆ ಸಂಪೂರ್ಣವಾಗಿ ಸಹಕರಿಸಲು ನಾವು ಬದ್ಧರಾಗಿದ್ದೇವೆ. ನಾವು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಸಂಸ್ಥೆಗಳಿಗೆ ಉತ್ತರ ನೀಡಿದ್ದೇವೆ ಎಂದು ಉತ್ತರಪ್ರದೇಶದ ನೋಯ್ಡಾ ಮೂಲದ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಮೋಹಿತ್ ಗೋಯೆಲ್ ತಿಳಿಸಿದ್ದಾರೆ.

ಬಿಜೆಪಿ ನಾಯಕ ಕ್ರಿತಿ ಸೋಮಯ್ಯ ಅವರು ನೀಡಿದ ದೂರಿನ ಮೇರೆಗೆ ಮೊನ್ನೆ ಮಂಗಳವಾರ ಗೋಯೆಲ್ ಮತ್ತು ಕಂಪೆನಿಯ ಅಧ್ಯಕ್ಷ ಅಶೋಕ್ ಚಡ್ಡ ಅವರ ವಿರುದ್ಧ ಐಪಿಸಿ ಸೆಕ್ಷನ್ 420 ಅಡಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಎಫ್ ಐಆರ್ ದಾಖಲಿಸಲಾಗಿದೆ.

ಫ್ರೀಡಂ 251 ಸೇರಿದಂತೆ ಅತಿ ಅಗ್ಗದ ದರದಲ್ಲಿ ಗ್ರಾಹಕರಿಗೆ ಸ್ಮಾರ್ಟ್ ಫೋನ್ ಗಳನ್ನು ವಿತರಿಸುತ್ತೇವೆ ಎಂಬುದನ್ನು ನಾನು ತಿಳಿಸುತ್ತೇನೆ ಎಂದು ಗೋಯೆಲ್ ತಿಳಿಸಿದ್ದಾರೆ.
ಫ್ರೀಡಂ 251 ಕಂಪೆನಿಯ ಪ್ರಮುಖ ಉತ್ಪನ್ನವಾಗಿದ್ದು, ಚಿಲ್ಲರೆ ದರ 251 ರೂಪಾಯಿಗೆ ಸ್ಮಾರ್ಟ್ ಫೋನ್ ಸಿಗುತ್ತದೆ ಎಂದು ಭರವಸೆ ನೀಡಿದೆ. ಕಳೆದ ತಿಂಗಳು ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ್ ಜೋಷಿ ಅವರ ಸಮ್ಮುಖದಲ್ಲಿ ರಿಂಗಿಂಗ್ ಬೆಲ್ಸ್ ಉತ್ಪನ್ನವನ್ನು ಬಿಡುಗಡೆ ಮಾಡಿತ್ತು. ತಮ್ಮ ಈ ಉತ್ಪನ್ನದ ಬಿಡುಗಡೆಗೆ ಸರ್ಕಾರದ ಬೆಂಬಲ ಕೂಡ ಇದೆ ಎಂದು ಕಂಪೆನಿ ಹೇಳುತ್ತಿದೆ.

ಆದರೆ ಸ್ಮಾರ್ಟ್ ಫೋನ್ ಇಷ್ಟೊಂದು ಅಗ್ಗದ ಬೆಲೆಗೆ ನೀಡಲು ಹೇಗೆ ಸಾಧ್ಯ ಎಂಬ ಸಂಶಯದ ಮೇಲೆ ಕಂಪೆನಿ ವಿರುದ್ಧ ದೂರು ದಾಖಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com