ಅಫ್ಜಲ್ ಗುರು ದೇಶದ್ರೋಹಿ ಎಂದು ಮಾಧ್ಯಮಗಳಲ್ಲಿ ಪಿಡಿಪಿ ಹೇಳಿಕೆ ನೀಡಲಿ: ಕುಮಾರ್ ವಿಶ್ವಾಸ್

ಜಮ್ಮು-ಕಾಶ್ಮೀರದಲ್ಲಿ ಮೈತ್ರಿ ಸರ್ಕಾರ ರಚನೆಗೆ ಮುಂದಾಗಿರುವ ಬಿಜೆಪಿ- ಪಿಡಿಪಿಗೆ ಈಗ ಅಫ್ಜಲ್ ಗುರು ಬಗೆಗಿನ ನಿಲುವನ್ನು ಸ್ಪಷ್ಟಪಡಿಸುವ ಹೊಸ ಸವಾಲು ಎದುರಾಗಿದೆ.
ಅಫ್ಜಲ್ ಗುರು ದೇಶದ್ರೋಹಿ ಎಂದು ಮಾಧ್ಯಮಗಳಲ್ಲಿ ಪಿಡಿಪಿ ಹೇಳಿಕೆ ನೀಡಲಿ: ಕುಮಾರ್ ವಿಶ್ವಾಸ್
ಅಫ್ಜಲ್ ಗುರು ದೇಶದ್ರೋಹಿ ಎಂದು ಮಾಧ್ಯಮಗಳಲ್ಲಿ ಪಿಡಿಪಿ ಹೇಳಿಕೆ ನೀಡಲಿ: ಕುಮಾರ್ ವಿಶ್ವಾಸ್

ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಮೈತ್ರಿ ಸರ್ಕಾರ ರಚನೆಗೆ ಮುಂದಾಗಿರುವ ಬಿಜೆಪಿ- ಪಿಡಿಪಿಗೆ ಈಗ ಅಫ್ಜಲ್ ಗುರು ಬಗೆಗಿನ ನಿಲುವನ್ನು ಸ್ಪಷ್ಟಪಡಿಸುವ ಹೊಸ ಸವಾಲು ಎದುರಾಗಿದೆ.

ಉಗ್ರ ಅಫ್ಜಲ್ ಗುರು ಗಲ್ಲು ಶಿಕ್ಷೆ ವಿಷಯದಲ್ಲಿ ಪರಸ್ಪರ ಭಿನ್ನ ನಿಲುವು ಹೊಂದಿದ್ದ ಪಕ್ಷಗಳು ಮೈತ್ರಿಗೆ ಮುಂದಾಗಿರುವುದನ್ನು ಕಾಂಗ್ರೆಸ್ ಪ್ರಶ್ನಿಸಿತ್ತು. ಈಗ ಆಮ್ ಆದ್ಮಿ ಪಕ್ಷವೂ ಪಿಡಿಪಿ-ಬಿಜೆಪಿ ಮೈತ್ರಿಯನ್ನು ಪ್ರಶ್ನಿಸಿದೆ. ಈ ಬಗ್ಗೆ ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿಗೆ ಪತ್ರ ಬರೆದಿರುವ ಆಪ್ ನ ನಾಯಕ ಕುಮಾರ್ ವಿಶ್ವಾಸ್, ದೇಶವಿರೋಧಿ ಘೋಷಣೆ ಕೂಗಿದ್ದ ಕಾಶ್ಮೀರಿ ಯುವಕನ ಬಂಧನವನ್ನು ಸ್ವಾಗತಿಸುತ್ತೀರಾ ಎಂದು ಪ್ರಶ್ನಿಸಿದ್ದಾರೆ.
"ಜಮ್ಮು-ಕಾಶ್ಮೀರದಲ್ಲಿ ಪಿಡಿಪಿ-ಬಿಜೆಪಿ ಮೈತ್ರಿ ಸರ್ಕಾರ ರಚನೆಯಾಗುತ್ತಿದೆ ಎಂದು ತಿಳಿದುಬಂದಿದೆ  ಈ ಹಿಂದೆ ನೀವು ಅಫ್ಜಲ್ ಗುರು ಗೆ ಗಲ್ಲು ಶಿಕ್ಷೆ ವಿಧಿಸಿದ್ದನ್ನು ವಿರೋಧಿಸಿದ್ದಿರಿ. ಆದರೆ ಗಲ್ಲು ಶಿಕ್ಷೆಯನ್ನು ಸಮರ್ಥಿಸಿಕೊಂಡಿದ್ದ ಬಿಜೆಪಿಯೊಂದಿಗೆ ಮೈತ್ರಿಗೆ ಮುಂದಾಗಿದ್ದೀರ, ಅಫ್ಜಲ್ ಗುರು ವಿಷಯದಲ್ಲಿ ನಿಮ್ಮ ನಿಲುವು ಬದಲಾಗಿದೆಯೇ?" ಎಂದು ಕುಮಾರ್ ವಿಶ್ವಾಸ್ ಕೇಳಿದ್ದಾರೆ.  
ಬಿಜೆಪಿ-ಪಿಡಿಪಿ ಮೈತ್ರಿ ಸರ್ಕಾರ ರಚನೆಯಾಗುತ್ತಿರುವುದಕ್ಕೆ ಅಭಿನಂದನೆಗಳನ್ನು ತಿಳಿಸಿರುವ ಕುಮಾರ್ ವಿಶ್ವಾಸ್, ಈಗ ಅಫ್ಜಲ್ ಗುರು ಹುತಾತ್ಮ ಅಲ್ಲ ದೇಶದ್ರೋಹಿ ಎಂದು ಮಾಧ್ಯಮಗಳಲ್ಲಿ ಪಿಡಿಪಿ ನಾಯಕರು ಹೇಳಿಕೆ ನೀಡಬೇಕು ಎಂದು  ಕುಮಾರ್ ವಿಶ್ವಾಸ್ ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com