ಏಪ್ರಿಲ್ ನಿಂದ ಫೋನ್ ಕರೆ ಮೂಲಕ ರೈಲು ಟಿಕೆಟ್ ರದ್ದುಗೊಳಿಸುವ ವ್ಯವಸ್ಥೆ ಜಾರಿಗೆ

ಪ್ರಯಾಣಿಕರ ಅನುಕೂಲಕ್ಕಾಗಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿರುವ ರೈಲ್ವೆ ಇಲಾಖೆ, ಈಗಾಗಲೇ ಕಾಯ್ದಿರಿಸಲಾಗಿರುವ ರೈಲ್ವೆ ಟಿಕೆಟ್ ನ್ನು ದೂರವಾಣಿ ಕರೆ ಮೂಲಕ ರದ್ದುಗೊಳಿಸುವ ವ್ಯವಸ್ಥೆಯನ್ನು ಏಪ್ರಿಲ್ ನಿಂದ ಜಾರಿಗೆ ತರಲಿದೆ.
ಏಪ್ರಿಲ್ ನಿಂದ ಫೋನ್ ಕರೆ ಮೂಲಕ ರೈಲು ಟಿಕೆಟ್ ರದ್ದುಗೊಳಿಸುವ ವ್ಯವಸ್ಥೆ ಜಾರಿಗೆ
ಏಪ್ರಿಲ್ ನಿಂದ ಫೋನ್ ಕರೆ ಮೂಲಕ ರೈಲು ಟಿಕೆಟ್ ರದ್ದುಗೊಳಿಸುವ ವ್ಯವಸ್ಥೆ ಜಾರಿಗೆ

ನವದೆಹಲಿ: ಪ್ರಯಾಣಿಕರ ಅನುಕೂಲಕ್ಕಾಗಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿರುವ ರೈಲ್ವೆ ಇಲಾಖೆ,  ಈಗಾಗಲೇ ಕಾಯ್ದಿರಿಸಲಾಗಿರುವ ರೈಲು ಟಿಕೆಟ್ ನ್ನು ದೂರವಾಣಿ ಕರೆ ಮೂಲಕ ರದ್ದುಗೊಳಿಸುವ ವ್ಯವಸ್ಥೆಯನ್ನು ಏಪ್ರಿಲ್ ನಿಂದ ಜಾರಿಗೆ ತರಲಿದೆ. 
ಟಿಕೆಟ್ ಕೌಂಟರ್ ಗಳಿಗೆ ತೆರಳಿ ಕಾಯ್ದಿರಿಸಲಾಗಿರುವ ಟಿಕೆಟ್ ಗಳನ್ನು ರದ್ದುಗೊಳಿಸುವುದಕ್ಕೆ ಸಮಸ್ಯೆ ಎದುರಿಸುವ ಪ್ರಯಾಣಿಕರಿಗೆ ಈ ವ್ಯವಸ್ಥೆ ಉಪಯುಕ್ತವಾಗಲಿದೆ. ಇದಕ್ಕಾಗಿ  ಟಿಕೆಟ್ ಕಾಯ್ದಿರಿಸಿರುವ ಪ್ರಯಾಣಿಕರು ಮಾಡಬೇಕಿರುವುದು ಇಷ್ಟೇ. 139 ಕರೆ ಮಾಡಿ ಕಾಯ್ದಿರಿಸಲಾಗಿರುವ ಟಿಕೆಟ್ ನ ವಿವರಗಳನ್ನು ನೀಡಬೇಕು, ನಂತರ ರೈಲ್ವೆ ಇಲಾಖೆಯಿಂದ ಪ್ರಯಾಣಿಕರ ದೂರವಾಣಿಗೆ(ಮೊಬೈಲ್ ಗೆ) ಒನ್ ಟೈಮ್ ಪಾಸ್ವರ್ಡ್ ಕಲಿಸಲಾಗುತ್ತದೆ. ಕರೆ ಮಾಡಿದ ದಿನದಂದೇ ಟಿಕೆಟ್ ಕೌಂಟರ್ ಗೆ ಹೋಗಿ ಪಾಸ್ವರ್ಡ್ ನ್ನು ಹೇಳಿದರೆ ಹಣ ವಾಪಸ್ ಪಡೆಯಬಹುದಾಗಿದೆ ಎಂದು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಟಿಕೆಟ್ ಹಣವನ್ನು ವಾಪಸ್ ಪಡೆಯಬೇಕಾದರೆ ಪ್ರಯಾಣಿಕರು ಹಲವು ಸಮಸ್ಯೆ ಎದುರಿಸುತ್ತಿದ್ದು, ಟಿಕೆಟ್ ಹಣವನ್ನು ನಿಗದಿತ ಸಮಯದಲ್ಲಿ ವಾಪಸ್ ಪಡೆಯುವ ವ್ಯವಸ್ಥೆ ಕಠಿಣವಾಗಿದೆ. ಹೊಸ ನಿಯಮಗಳ ಪ್ರಕಾರ ಟಿಕೆಟ್ ರದ್ದುಗೊಳಿಸುವ ನೈಜ ಪ್ರಯಾಣಿಕರಿಗೆ ಸಹಾಯವಾಗಲೆಂದು ಶುಲ್ಕವನ್ನು ದುಪ್ಪಟ್ಟುಗೊಳಿಸಲಾಗಿದೆ. ಪ್ರಯಾಣಿಕರು ಟಿಕೆಟ್ ಹಣ ವಾಪಸ್ ಪಡೆಯುವುದು ಮತ್ತಷ್ಟು ಸುಲಭವಾಗಿಸಲು ಏಪ್ರಿಲ್ ನಿಂದ ಫೋನ್ ಕರೆ ಮೂಲಕ ರೈಲ್ವೆ ಟಿಕೆಟ್ ರದ್ದುಗೊಳಿಸುವ ವ್ಯವಸ್ಥೆ ಜಾರಿಗೆ ಬರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com