ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನಿಯಿಂದ ದೇಶದ ಜನತೆಗೆ ಈಸ್ಟರ್ ಶುಭಾಶಯ

ಈಸ್ಟರ್ ಭಾನುವಾರ ಪ್ರಯುಕ್ತ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಉಹ ರಾಷ್ಟ್ರಪತಿ ಮೊಹಮ್ಮದ್ ಹಮೀದ್ ಅನ್ಸಾರಿ ಮತ್ತು ಪ್ರಧಾನ ಮಂತ್ರಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಈಸ್ಟರ್ ಭಾನುವಾರ ಪ್ರಯುಕ್ತ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಉಹ ರಾಷ್ಟ್ರಪತಿ ಮೊಹಮ್ಮದ್ ಹಮೀದ್ ಅನ್ಸಾರಿ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಜನತೆಗೆ ಶುಭ ಕೋರಿದ್ದಾರೆ.

ರಾಷ್ಟ್ರಪತಿಯವರು ತಮ್ಮ ಸಂದೇಶದಲ್ಲಿ, ಪವಿತ್ರವಾದ ದಿನ ಈಸ್ಟರ್ ಹಬ್ಬ ಜೀಸಸ್ ಕ್ರೈಸ್ತರ ಶಾಶ್ವತ ಪ್ರೀತಿ ಮತ್ತು ಮಾನವೀಯತೆಯನ್ನು ನೆನಪಿಸುವ ದಿನವಾಗಿದ್ದು, ಅವರ ಸತ್ಯ, ತ್ಯಾಗ ಮತ್ತು ಕ್ಷಮಾಗುಣ ಜನರಿಗೆ ಸ್ಪೂರ್ತಿಯನ್ನು ನೀಡುತ್ತದೆ ಎಂದು ಹೇಳಿದ್ದಾರೆ.

ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ತಮ್ಮ ಸಂದೇಶದಲ್ಲಿ, ಪ್ರೀತಿ ದ್ವೇಷಕ್ಕಿಂತ ಗಟ್ಟಿಯಾದದ್ದು ಎಂದು ಈಸ್ಟರ್ ಭಾನುವಾರ ಸಾರುತ್ತದೆ.ಈ ಹಬ್ಬ ಜನರಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಂತೋಷವನ್ನು ತರುತ್ತದೆ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಈಸ್ಟರ್ ಹಬ್ಬದ ಪ್ರಯುಕ್ತ ಎಲ್ಲರಿಗೂ ಶುಭಾಶಯಗಳು. ಜೀಸಸ್ ಕ್ರೈಸ್ತರ ಸ್ಪೂರ್ತಿದಾಯಕ ಬೋಧನೆಗಳು ಸೌಹಾರ್ದತೆ ಮತ್ತು ಒಗ್ಗಟ್ಟಿನಿಂದ ಜನರು ಬದುಕಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

ಶಿಲುಬೆಗೇರಿಸಿದ ನಂತರ ಕ್ರೈಸ್ತರ ಪುನರುತ್ಥಾನದ ದಿನವಾಗಿ ಮತ್ತು ಕಾಲ್ವರಿಯ ಸಾವಿನ ಮಹತ್ವವನ್ನು ಸಾರುವ ದಿನವನ್ನಾಗಿ ಈಸ್ಟರ್ ಭಾನುವಾರ ಹಬ್ಬವನ್ನು ಆಚರಿಸಲಾಗುತ್ತದೆ. ಕ್ರಿಸ್ತಿಯನ್ನರು 40 ದಿನಗಳ ಉಪವಾಸವನ್ನು ಇಂದು ಮುಕ್ತಾಯಗೊಳಿಸುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com