2002 ರ ಗುಜರಾತ್ ದಾಳಿಗೂ 1984 ರ ಸಿಖ್ ದೊಂಬಿಗೂ ವ್ಯತ್ಯಾಸವಿದೆ: ಕನ್ಹಯ್ಯ ಕುಮಾರ್

ದೇಶದಲ್ಲಿ 2002 ರಲ್ಲಿ ನಡೆದ ಗುಜರಾತ್ ದೊಂಬಿಗೂ ಮತ್ತು 1984 ರಲ್ಲಿ ನಡೆದ ಬಹಳ ವ್ಯತ್ಯಾಸವಿದೆ. ಎರಡು ಗಲಭೆಗಳು ರಾಜ್ಯ ಆಡಳಿತ ಯಂತ್ರದ ಬೆಂಬಲದೊಂದಿಗೆ ...
ನರೇಂದ್ರ ಮೋದಿ ಮತ್ತು ಕನ್ನಯ್ಯ ಕುಮಾರ್
ನರೇಂದ್ರ ಮೋದಿ ಮತ್ತು ಕನ್ನಯ್ಯ ಕುಮಾರ್

ನವದೆಹಲಿ: ದೇಶದಲ್ಲಿ 2002 ರಲ್ಲಿ ನಡೆದ ಗುಜರಾತ್ ದೊಂಬಿಗೂ ಮತ್ತು 1984 ರಲ್ಲಿ ನಡೆದ ಬಹಳ ವ್ಯತ್ಯಾಸವಿದೆ. ಎರಡು ಗಲಭೆಗಳು ರಾಜ್ಯ ಆಡಳಿತ ಯಂತ್ರದ ಬೆಂಬಲದೊಂದಿಗೆ ನಡೆದಿದೆ ಎಂದು ಆರೋಪಿಸಿದ್ದಾರೆ.

ತುರ್ತು ಪರಿಸ್ಥಿತಿ ಹಾಗೂ ಫ್ಯಾಸಿಸಂ ಗಳಿಗೆ ಮೂಲಭೂತವಾದ ವ್ಯತ್ಯಾಸವಿದೆ. ಜನರ ಗುಂಪು ಸಾಮಾನ್ಯ ವ್ಯಕ್ತಿಯೊಬ್ಬನನ್ನು ಕೊಲ್ಲುವುದಕ್ಕೂ, ಆಡಳಿತ ಯಂತ್ರವೇ ಜನರನ್ನು ಕೊಲ್ಲುವದಕ್ಕೆ ಸಾಕಷ್ಟು ವ್ಯತ್ಯಾಸವಿದೆ.

1984 ರ ಗಲಭೆಯಲ್ಲಿ ಒಂದು ಪಕ್ಷ ಗೂಂಡಾಗಿರಿ ಮಾಡಿತ್ತು. ಆದರೆ 2002 ಗುಜರಾತ್ ಸಾಮೂಹಿಕ ಹತ್ಯಾಕಾಂಡದಲ್ಲಿ  ಇಡೀ ರಾಜ್ಯದ ಆಡಳಿತ ಯಂತ್ರ ಗೂಂಡಾಗಿರಿ ಮಾಡಿತ್ತು ಎಂದು ದೂರಿದ್ದಾರೆ.

ಭಾರತದಲ್ಲಿರುವ ಬುದ್ದಿಜೀವಿಗಳಿಗೆ ಮೋದಿ ಪ್ರೊತ್ಸಾಹ ನೀಡುತ್ತಿಲ್ಲ, ಮೋದಿ ಪ್ರಭುತ್ವವನ್ನು ಯಾವ ಬುದ್ದಿಜೀವಿಗಳು ಒಪ್ಪಿಕೊಳ್ಳುವುದಿಲ್ಲ ಎಂದು ಕನ್ಹಯ್ಯ ಕುಮಾರ್ ಹೇಳಿದ್ದಾರೆ. ವಿವಿಗಳ ಮೇಲೆ ಹಿಟ್ಲರ್ ರೀತಿಯ ದಾಳಿಗಳು ನಡೆಯುತ್ತಿವೆ. ಪ್ರಸಕ್ತ ದಿನಗಳಲ್ಲಿ ಕೋಮುವಾದ ವನ್ನು ಎದುರಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕೇಂದ್ರ ಎನ್ ಡಿ ಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com